ಕರ್ನಾಟಕ

karnataka

ETV Bharat / sitara

ದೋಬಾರಾ ಚಿತ್ರದ ಚಿತ್ರೀಕರಣ 23 ದಿನಗಳಲ್ಲಿ ಅಂತ್ಯ: ಸಿನಿಮಾ ರಹಸ್ಯ ಬಿಚ್ಚಿಟ್ಟ ತಾಪ್ಸಿ - ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾ ದೋಬಾರಾ

ತಾಪ್ಸಿ ಪನ್ನು ಅನುರಾಗ್ ಕಶ್ಯಪ್ ಅವರ ಮುಂಬರುವ ಚಿತ್ರ ದೋಬಾರಾ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಸಿನಿಮಾ ಅನುರಾಗ್ ಅವರ ಹಿಂದಿನ ಚಿತ್ರಗಳಂತೆ ಡಾರ್ಕ್ ನಾಟಕವಲ್ಲ, ಉತ್ತಮವಾದ ಚಿತ್ರವಾಗಿದೆ ಎಂದು ತಾಪ್ಸಿ ಪನ್ನು ಹೇಳಿದ್ದಾರೆ.

ನಟ ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್
Actor Taapsee Pannu and Anurag Kashyap

By

Published : Mar 22, 2021, 1:26 PM IST

ಮುಂಬೈ: ತೆರಿಗೆ ವಂಚನೆ ಆರೋಪದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ನಿವಾಸ ಹಾಗೂ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು. ಇದೀಗ, ಐಟಿ ಪರಿಶೀಲನೆ ಮುಗಿದ ಬಳಿಕ ಇಬ್ಬರೂ ಶೂಟಿಂಗ್‌ನಲ್ಲಿ ಪಾಲ್ಗೊಂಡು ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಮನ್ಮಾರ್ಜಿಯಾನ್ ಸಿನಿಮಾದ ನಂತರ ತಾಪ್ಸಿ ಇದೀಗ ಕಶ್ಯಪ್​ ನಿರ್ದೇಶನದ ದೋಬಾರಾ ಚಿತ್ರದ ಮೂಲಕ ಮತ್ತೆ ಒಟ್ಟಾಗಿದ್ದಾರೆ. ಚಿತ್ರದ ಚಿತ್ರೀಕರಣವು ಫೆಬ್ರವರಿಯಲ್ಲಿ ಆರಂಭವಾಗಿದ್ದು, ಕೇವಲ 23 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಈ ನಡುವೆ ತಾಪ್ಸಿ ಚಿತ್ರತಂಡದೊಂದಿಗೆ ಎಂಜಾಯ್​ ಮಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ತಾಪ್ಸಿ ಶೇರ್​ ಮಾಡಿರುವ ವಿಡಿಯೋ

ವಿಡಿಯೋದಲ್ಲಿ ತಾಪ್ಸಿ ಮಾತನಾಡಿ, ದೋಬಾರಾ ಸಿನಿಮಾ ಕಷ್ಯಶ್​ ನಿರ್ದೇಶನದ ಉತ್ತಮ ಸಿನಿಮಾವಾಗಿದೆ. ಅವರ ಎಲ್ಲಾ ಚಿತ್ರಕ್ಕಿಂತ ಭಿನ್ನವಾದ ಕಥಾ ಹಂದರ ಹೊಂದಿದೆ. ಈ ಸಿನಿಮಾವನ್ನು ಕೇವಲ 23 ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಓದಿ: 'ಮುಂಬೈಯ್​​ಕರ್​​​​​​​​​​​​​' ಸಿನಿಮಾದ ತಮ್ಮ ಫಸ್ಟ್​​​ಲುಕ್ ಬಿಡುಗಡೆ ಮಾಡಿದ ವಿಜಯ್ ಸೇತುಪತಿ

ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಕಪೂರ್, ಸುನೀರ್ ಖೇತರ್ಪಾಲ್ ಮತ್ತು ಗೌರವ್ ಬೋಸ್ ನಿರ್ಮಿಸಿದ್ದಾರೆ.

ABOUT THE AUTHOR

...view details