ಕರ್ನಾಟಕ

karnataka

ETV Bharat / sitara

ತೆರೆ ಮೇಲೆ ಸುಷ್ಮಾ ಆಗುವುದೇ ನನ್ನ ಪುಣ್ಯ; ಬಯೋಪಿಕ್​​ ಮಾಡುವುದಾರೆ ನನ್ನನ್ನು ಸಂಪರ್ಕಿಸಿ - ಬಾಲಿವುಡ್ ನಟಿ ತಾಪ್ಸಿ ಪನ್ನು

ಮಾಜಿ ಕೇಂದ್ರ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಬಯೋಪಿಕ್ ನಟಿಸಲು ಸಿದ್ಧ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು ನುಡಿದಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Aug 8, 2019, 2:32 PM IST

ಹೃದಯಾಘಾತದಿಂದ ಮಂಗಳವಾರ ರಾತ್ರಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ ಇಹಲೋಕ ತ್ಯಜಿಸಿದರು. ಇವರ ಸಾವಿಗೆ ದೇಶದ ಜನತೆ ಸಂತಾಪ ಸೂಚಿಸಿತು. ಬಾಲಿವುಡ್ ತಾರೆಯರು ಕೂಡ ಸುಷ್ಮಾ ಸಾವಿಗೆ ಕಂಬಿನಿ ಮಿಡಿಯಿತು.

ಈಗ ಸುಷ್ಮಾ ಸ್ವರಾಜ್ ಅವರ ಜೀವನ-ಸಾಧನೆ ತೆರೆ ಮೇಲೆ ಬರಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಏತನ್ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಸುಷ್ಮಾ ಸ್ವರಾಜ್ ಆಗಿ ತೆರೆಯ ಮೇಲೆ ಮಿಂಚಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸುಷ್ಮಾ ಬಯೋಪಿಕ್​​ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದರೆ ನಾನು ಕೈಬಿಡುವುದಿಲ್ಲ. ಅಂತಹ ಲೆಜೆಂಡ್​ ಬಯೋಪಿಕ್​ನಲ್ಲಿ ಯಾರು ತಾನೆ ನಟಿಸಲು ಬಯಸೋಲ್ಲ ಹೇಳಿ?. ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುವುದು ನನ್ನ ಅದೃಷ್ಟ ಎಂದಿದ್ದಾರೆ.

ಇನ್ನು ಇದೇ 15 ರಂದು ಬಿಡುಗಡೆಯಾಗುತ್ತಿರುವ 'ಮಿಷನ್ ಮಂಗಲ್'​ ಚಿತ್ರದ ಪ್ರಮೋಷನ್​​ನಲ್ಲಿರುವ ತಾಪ್ಸಿ, 'ರಾಜಕಾರಣಿಯ ಚಿತ್ರ ಮಾಡುವುದಾದರೆ ನಾನು, ಸುಷ್ಮಾ ಜೀ ಪಾತ್ರವನ್ನೇ ಮಾಡುತ್ತೇನೆ’ ಎಂದಿದ್ದಾರೆ.

ಇದೇ ವೇಳೆ ಸುಷ್ಮಾ ಸ್ವರಾಜ್ ಅವರ ಭಾಷಣ ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಾಪ್ಸಿ, ನಾನು ಅವರ ಅಭಿಮಾನಿ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸುಷ್ಮಾ ಅವರ ಹಠಾತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details