ಕರ್ನಾಟಕ

karnataka

ETV Bharat / sitara

ಅರ್ಶದ್ ಸಯ್ಯದ್ ನಿರ್ದೇಶನದ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಆಗಿ ತಾಪ್ಸಿ ಪನ್ನು - Woh Ladki Hai Kahaan

ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ 'ದೋ ಬಾರಾ' ಸಿನಿಮಾದಲ್ಲಿ ನಟಿಸುತ್ತಿರುವ ತಾಪ್ಸಿ ಪನ್ನು , ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ವೋ ಲಡ್​​​ಕಿ ಹೈ ಕಹಾ' ಎಂದು ಹೆಸರಿಡಲಾಗಿದ್ದು ಅರ್ಶದ್ ಸಯ್ಯದ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

Woh Ladki Hai Kahaan
'ವೋ ಲಡ್​​​ಕಿ ಹೈ ಕಹಾ'

By

Published : Feb 22, 2021, 3:20 PM IST

ನಟಿ ತಾಪ್ಸಿ ಪನ್ನು ಹಿಂದಿ, ತಮಿಳು ಭಾಷೆಗಳ 4-5 ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ರಶ್ಮಿ ರಾಕೆಟ್ ಚಿತ್ರಕ್ಕಾಗಿ ಅವರು ಮೈದಾನದಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋಗಳು ಇತ್ತಿಚೆಗೆ ವೈರಲ್ ಆಗಿತ್ತು. ಕೋವಿಡ್​​-19 ಲಾಕ್​ಡೌನ್ ನಂತರ ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾವೊಂದರ ಚಿತ್ರೀಕರಣ ಆರಂಭಿಸಿರುವ ತಾಪ್ಸಿ ಇದೀಗ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಅರ್ಶದ್ ಸಯ್ಯದ್ ನಿರ್ದೇಶನದ ಈ ಚಿತ್ರಕ್ಕೆ 'ವೋ ಲಡ್​​​ಕಿ ಹೈ ಕಹಾ' ಎಂದು ಹೆಸರಿಡಲಾಗಿದೆ. ಇದು ಅರ್ಶದ್ ನಿರ್ದೇಶನದ ಮೊದಲ ಸಿನಿಮಾವಾಗಿದೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ತಾಪ್ಸಿ ಪನ್ನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ತಾಪ್ಸಿ ಜೋಡಿಯಾಗಿ ನಟಿಸುತ್ತಿರುವ ಪ್ರತೀಕ್ ಗಾಂಧಿ, ಈ ಚಿತ್ರದಲ್ಲಿ ಕೋಮುವಾದಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್ ರಾಯ್ ಕಪೂರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು, ಅಭಿಮಾನಿಗಳು ತಾಪ್ಸಿಯನ್ನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನೋಡಲು ಕಾಯುತ್ತಿದ್ದಾರೆ.

ಇದನ್ನೂ ಓದಿ:ನಟ ಟಿನು ವರ್ಮಾ ಮೇಲೆ ಹಲ್ಲೆ, ದರೋಡೆ: ಪ್ರಕರಣ ದಾಖಲು

ಸದ್ಯಕ್ಕೆ ತಾಪ್ಸಿ, ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ 'ದೋ ಬಾರಾ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಕಾಂಬಿನೇಷನ್​ನಲ್ಲಿ ಬರುತ್ತಿರುವ ಮೂರನೇ ಸಿನಿಮಾ. 2018 ರಲ್ಲಿ ಬಿಡುಗಡೆಯಾದ 'ಮನ್​ಮರ್ಜಿಯಾನ್' ಹಾಗೂ 2019ರಲ್ಲಿ ಬಿಡುಗಡೆಯಾದ 'ಸಾಂದ್ ಕಿ ಆಂಖ್' ಚಿತ್ರದ ನಂತರ ಇದೀಗ ಈ ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ 'ಸಾಂದ್ ಕಿ ಆಂಖ್​' ಚಿತ್ರದಲ್ಲಿ ಅನುರಾಗ್ ಕಶ್ಯಪ್ ನಿರ್ಮಾಪಕರಾಗಿದ್ದರು. ಬಾಲಾಜಿ ಫಿಲ್ಮ್​ ಬ್ಯಾನರ್​​​ನ ಕಲ್ಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಏಕ್ತಾ ಕಪೂರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿಹಿತ್ ಭಾವೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದೋ ಬಾರಾ ಚಿತ್ರದೊಂದಿಗೆ ತಾಪ್ಸಿ ಪನ್ನು ಹಸೀನಾ ದಿಲ್​​​ರುಬಾ, ರಶ್ಮಿ ರಾಕೆಟ್, ಲೂಪ್ ಲಪೇಟಾ, ರನ್ ಲೋಲಾ ರನ್​ ಸೇರಿ 4-5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ABOUT THE AUTHOR

...view details