ನವದೆಹಲಿ: ತಾಪ್ಸಿ ಪನ್ನು ಅಭಿನಯದ 'ಹಸೀನ್ 'ದಿಲ್ ಮೆಲ್ಟ್ ಕರ್ದಾ' ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಬಗ್ಗೆ ಚಲನಚಿತ್ರ ನಿರ್ಮಾಪಕ ಆನಂದ್ ರಾಯ್ ಮಾತನಾಡಿದ್ದು, “ ಜೂನ್ 15 ರಂದು ಹಸೀನ್ ದಿಲ್‌ರುಬಾ ಸಿನಿಮಾದ ಹಾಡು 'ದಿಲ್ ಮೆಲ್ಟ್ ಕಾರ್ಡಾ' ಬಿಡುಗಡೆಯಾಗುತ್ತಿದೆ. ಮುದ್ದಾದ ದಂಪತಿಯ ಸಂತೋಷವನ್ನು ವೀಕ್ಷಿಸಿ” ಎಂದು ಹೇಳಿದ್ದಾರೆ.
ಗಾಯಕರಾದ ನವರಾಜ್ ಹನ್ಸ್ ಮತ್ತು ನಿಖಿತಾ ಗಾಂಧಿ ಹಾಡಿರುವ, ' 'ದಿಲ್ ಮೆಲ್ಟ್ ಕರ್ದಾ' ಅನ್ನು ಅಮಿತ್ ತ್ರಿವೇದಿ ಸಂಯೋಜಿಸಿದ್ದಾರೆ. ವರುಣ್ ಗ್ರೋವರ್ ಸಾಹಿತ್ಯವಿದೆ. ಈ ಮೊದಲು ನೆಟ್‌ಫ್ಲಿಕ್ಸ್‌ನಲ್ಲಿ 'ಹಸೀನ್ ದಿಲ್‌ರುಬಾ' ಚಿತ್ರದ ಮೊದಲ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ತಾಪ್ಸಿ ಜೊತೆಗೆ ವಿಕ್ರಾಂತ್ ಮಾಸ್ಸಿ ಮತ್ತು ಹರ್ಷವರ್ಧನ್ ರಾಣೆ ನಟಿಸಿದ್ದಾರೆ.