ಹೈದರಾಬಾದ್: ತಾಪ್ಸಿ ಪನ್ನು ಅವರ ಬಹು ನಿರೀಕ್ಷಿತ ಸಿನಿಮಾ 'ರಶ್ಮಿ ರಾಕೆಟ್' ಸಿನಿಮಾದ ಮೊದಲ ಹಂತದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಮುಂದಿನ ಹಂತದ ಚಿತ್ರೀಕರಣ ಗುಜರಾತ್ನಲ್ಲಿ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈಗಾಗಲೇ ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪ್ಸಿ, ಅಥ್ಲೀಟ್ ರಶ್ಮಿಯಾಗಿ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಧೂಳೆಬ್ಬಿಸಲಿದ್ದಾರೆ.
ಆಕರ್ಷ್ ಖುರಾನ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣವನ್ನು ಪುಣೆ ಮತ್ತು ರಾಂಚಿಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಕೋವಿಡ್-19 ಹಿನ್ನೆಲೆ ಇದೀಗ 14 ದಿನಗಳ ಕಾಲ ಗುಜರಾತ್ನಲ್ಲಿ ಶೂಟಿಂಗ್ ಮಾಡಲು 'ರಶ್ಮಿ ರಾಕೆಟ್' ತಂಡ ಸಜ್ಜಾಗಿದೆ. ಈ ಪ್ರಕಾರ ಮುಂದಿನ ವಾರದಿಂದ ಗುಜರಾತ್ನಲ್ಲಿ ಚಿತ್ರೀಕರಣ ನಡೆಯಲಿದೆ.
ಇನ್ನು ಕಳೆದ ಕೆಲವು ತಿಂಗಳುಗಳಿಂದ ಈ ಚಿತ್ರಕ್ಕಾಗಿ ತಾಪ್ಸಿ ತಮ್ಮ ದೇಹವನ್ನು ಮತ್ತಷ್ಟು ದಂಡಿಸಿದ್ದಾರೆ. ಈ ಹಿಂದೆ ಮನ್ಮರ್ಜಿಯಾ ಹಾಗೂ ಸೂರ್ಮಾ ಚಿತ್ರಗಳಲ್ಲಿ ತಾಪ್ಸಿ ಹಾಕಿ ಕ್ರೀಡಾಪಟುವಿನ ಪಾತ್ರದಲ್ಲಿ ರಂಜಿಸಿದ್ದಾರೆ.