ಜುಲೈ 24 ರಂದು ಡಿಸ್ಕಿ+ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾದ ಸುಶಾಂತ್ ಸಿಂಗ್ ರಜಪೂತ್ ಅಭಿನಯದ 'ದಿಲ್ ಬೇಚಾರ' ಸಿನಿಮಾಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳಿಗೆ ತಮ್ಮ ಮೆಚ್ಚಿನ ನಟನ ಹೊಸ ಸಿನಿಮಾ ನೋಡಿದ ಖುಷಿ ಒಂದೆಡೆಯಾದರೆ, ಸುಶಾಂತ್ ಇಂದು ನಮ್ಮೊಂದಿಗೆ ಇಲ್ಲವಲ್ಲಾ ಎಂಬ ಬೇಸರ ಮತ್ತೊಂದೆಡೆ.
ಬೆಂಗಾಳಿ ನಟಿ ಸ್ವಸ್ತಿಕ್ ಮುಖರ್ಜಿ ಕೂಡಾ ನಾನು ಈ ಸಿನಿಮಾವನ್ನು ಸಂಪೂರ್ಣ ನೋಡಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಸ್ವಸ್ತಿಕ್ ಮುಖರ್ಜಿ ನಾಯಕಿ ಸಂಜನಾ ಸಂಘಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಸುಶಾಂತ್ ಜೊತೆ ಕೂಡಾ ಸ್ವಸ್ತಿಕ್ ಮುಖರ್ಜಿ 2015 ರಲ್ಲಿ ಬಿಡುಗಡೆಯಾದ 'ಡಿಟೆಕ್ಟಿವ್ ಭ್ಯೊಮ್ಕೇಶ್ ಬಕ್ಷಿ' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಬಿಡುಗಡೆಯಾಗುವ ಮುನ್ನ ಕೂಡಾ ನಾನು ಸಿನಿಮಾವನ್ನು ನೋಡಿರಲಿಲ್ಲ. ಆದ್ದರಿಂದ ಕಳೆದ ಶುಕ್ರವಾರ ನಾನು ಹಾಗೂ ನನ್ನ ಮನೆಯವರು ಸಿನಿಮಾ ನೋಡಲು ಬಹಳ ಕಾತರದಿಂದ ಕಾಯುತ್ತಿದ್ದೆವು. ಕಾಫಿ, ಟೀ, ಪಾಪ್ಕಾರ್ನ್ ಜೊತೆ ನಾವೆಲ್ಲರೂ ರೆಡಿ ಇದ್ದೆವು. 7.30 ಕ್ಕೆ ಸಿನಿಮಾ ಶುರುವಾಯ್ತು. ಆದರೆ ಗಿಟಾರ್ ಹಿಡಿದಿದ್ದ ಸುಶಾಂತ್ ಕಪ್ಪು-ಬಿಳುಪು ನಗುಮುಖದ ಫೋಟೋ ನೋಡುತ್ತಿದ್ದಂತೆ ನನಗೆ ಮೂಡ್ ಆಫ್ ಆಯ್ತು.
ಸುಶಾಂತ್ ಅವರ ಸಾವು ನನ್ನನ್ನು ಬಹಳ ದಿನಗಳಿಂದ ಕಾಡುತ್ತಲೇ ಇತ್ತು. ನಾನು ನಟಿಯಾಗಿ ಅಲ್ಲ, ಆಡಿಯನ್ ಆಗಿ ಸಿನಿಮಾ ನೋಡಲು ಬಯಸಿದ್ದೆ. ಆದರೆ ಅದು ಸಾಧ್ಯವಾಗಲೇ ಇಲ್ಲ, ನೆಮ್ಮದಿಯಾಗಿ ಕುಳಿತು ಸಿನಿಮಾ ನೋಡಲಾಗಲಿಲ್ಲ. ಸುಶಾಂತ್ ಜೊತೆ ಶೂಟಿಂಗ್ನಲ್ಲಿ ಕಳೆದ ಕ್ಷಣಗಳು ಒಂದೊಂದಾಗಿ ಕಣ್ಣಮುಂದೆ ಬರತೊಡಗಿತು ಎಂದು ಸ್ವಸ್ತಿಕ್ ಮುಖರ್ಜಿ ಹೇಳಿಕೊಂಡಿದ್ದಾರೆ.
'ದಿಲ್ ಬೇಚಾರ' ಶೂಟಿಂಗ್ ಸ್ಪಾಟ್
ನಾನು ಸಿನಿಮಾ ಪೂರ್ತಿ ನೋಡದೆ ಹೊರಗೆ ಎದ್ದು ಹೋದೆ. ಸಿನಿಮಾ ನೋಡಿದ ನಂತರ ನನ್ನ ಮಗಳು ನನ್ನನ್ನು ಬಹಳ ಸಣ್ಣ ದನಿಯಿಂದ ಕರೆದು ನಾವು ಸಿನಿಮಾ ನೋಡಿದೆವು. ಚಿಕ್ಕಮ್ಮ ಬಹಳ ಅತ್ತರು ಎಂದು ಹೇಳಿದಾಗ ನನ್ನ ಕಣ್ಣಂಚು ಕೂಡಾ ಒದ್ದೆಯಾಯ್ತು. ಆ ದಿನ ನಾವೆಲ್ಲರೂ ಬಹಳ ಎಮೋಷನಲ್ ಆಗಿದ್ದೆವು. ಸುಶಾಂತ್ ಅನುಪಸ್ಥಿತಿ ಬಹಳ ಕಾಡುತ್ತಿತ್ತು ಎಂದು ಸ್ವಸ್ತಿಕ್ ಮುಖರ್ಜಿ ಬಹಳ ಬೇಸರದಿಂದ ಹೇಳಿಕೊಂಡಿದ್ದಾರೆ.
'ದಿಲ್ ಬೇಚಾರ' ಚಿತ್ರವನ್ನು ಮುಖೇಶ್ ಛಾಬ್ರಾ ನಿರ್ದೇಶಿಸಿದ್ದಾರೆ. 2014 ರಲ್ಲಿ ಬಿಡುಗಡೆಯಾದ ಹಾಲಿವುಡ್ ಚಿತ್ರ ನಗುಮುಖದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ನಗುಮುಖ ಚಿತ್ರದ ಕೆಲವೊಂದು ಅಂಶಗಳನ್ನು ಈ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ ಜಾನ್ ಗ್ರೀನ್ ಬರೆದ ಪುಸ್ತಕವಾಗಿದೆ.