ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಬಿಜೆಪಿ ಕಾರ್ಯಕರ್ತನಿಗೆ ತಕ್ಕ ಉತ್ತರ ನೀಡಿದ್ದಾರೆ. 'ನನಗೆ ಭಕ್ತರ ಜೀವನ ಖುಷಿಗೊಳಿಸಿದ ಸಂತೋಷ ಇದೆ' ಎಂದು ಟಾಂಗ್ ಕೊಟ್ಟಿದ್ದಾರೆ.
ಸ್ವರಾ ಜತೆ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೋ ಮಾಡಿಕೊಂಡು, aayega toh Modi hi ಎಂದು ಉಚ್ಛರಿಸಿದ್ದ. ಅಲ್ಲದೆ ತನ್ನ ಟ್ವಿಟ್ಟರ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ, ನೋಡಿ ಸ್ವರಾಗೆ ಹೇಗೆ ಅವಮಾನಿಸಿದೆ ಎಂದು ಬರೆದುಕೊಂಡಿದ್ದ. ಕ್ಷಣಾರ್ಧದಲ್ಲೇ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದನ್ನು ಗಮನಿಸಿರುವ ಬಾಲಿವುಡ್ ಬೆಡಗಿ ಸ್ವರಾ, ತಮ್ಮ ವಿಡಿಯೋ ದುರ್ಬಳಕೆ ಮಾಡಿಕೊಂಡವನ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಸ್ವರಾ, 'ನಿನ್ನೆ ಏರ್ಪೋರ್ಟ್ನಲ್ಲಿ ಮೋದಿ ಭಕ್ತನೋರ್ವ ನನ್ನೊಂದಿಗೆ ಸೆಲ್ಫಿಗೆ ಮನವಿ ಮಾಡಿದ. ಅವನ ಬಯಕೆಯನ್ನು ನಾನು ನಿರಾಕರಿಸಲಿಲ್ಲ. ನನ್ನ ಜತೆ ಸೆಲ್ಫಿ ಕೇಳುವ ವ್ಯಕ್ತಿಗಳೂ ಯಾವುದೇ ಪಕ್ಷದವರಾಗಿದ್ದರೂ ಕೂಡ ನಾನು ಭೇದ-ಭಾವ ಮಾಡುವುದಿಲ್ಲ. ಆದ್ರೆ ಆತ ಸೆಲ್ಫಿ ಕ್ಲಿಕ್ಕಿಸುವ ಬದಲು ವಿಡಿಯೋ ಮಾಡಿಕೊಂಡು ಆಯೇಗಾ ಮೋದಿ ಎಂದ. ಇದು ಮೋದಿ ಭಕ್ತರ ಕುತಂತ್ರ ಬುದ್ಧಿಯನ್ನು ತೋರಿಸುತ್ತದೆ' ಎಂದು ಜರಿದಿದ್ದಾರೆ.
ಇನ್ನು ನೇರ ನುಡಿಯ ಸ್ವರಾ ಭಾಸ್ಕರ್ ಈ ಹಿಂದೆ ಮೋದಿ ಅವರನ್ನು ಟೀಕಿಸಿದ್ದರು. ಅಲ್ಲದೆ, ಪ್ರಸಕ್ತ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಕಾಂಪೇನ್ ಕೂಡ ಮಾಡಿದ್ದಾರೆ. ಇದು ಬಿಜೆಪಿ ಕಾರ್ಯಕರನ್ನು ಕೆರಳಿಸಿದೆ.