ಮುಂಬೈ (ಮಹಾರಾಷ್ಟ್ರ): ಬಲಪಂಥೀಯರ ಮತ್ತು ಸಂಘಪರಿವಾರದ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮಗೆ ಕೋವಿಡ್ ಪಾಸಿಟಿವ್ ಆದ ವಿಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದರು. ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಟ್ವಿಟರ್ನಾದ್ಯಂತ ಸ್ವರಾ ಭಾಸ್ಕರ್ ಟ್ರೋಲ್ಗೊಳಗಾಗಿದ್ದರು. ಅಭಿಮಾನಿಗಳು ಮತ್ತು ಚಿತ್ರರಂಗದ ಸದಸ್ಯರು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಆದಾಗ್ಯೂ ಅವರಲ್ಲಿ ಕೆಲ ಕಿಡಿಗೇಡಿಗಳು ಸಂಭ್ರಮಾಚರಣೆ ನಡೆಸಿ ಅವರ ಸಾವಿಗೆ ಹಾರೈಸಿದ್ದರು.