ಕರ್ನಾಟಕ

karnataka

ETV Bharat / sitara

ಮತ ಜಾಗೃತಿಗೆ ಬಳಕೆಯಾಯ್ತು ನಟಿಯ 'ಹಸ್ತಮೈಥುನ' ವಿಚಾರ! - ಸ್ವರಾ ಭಾಸ್ಕರ್

'ವೀರೆ ದಿ ವೆಡ್ಡಿಂಗ್​' ಚಿತ್ರದಲ್ಲಿಯ ನಟಿ ಸ್ವರಾ ಭಾಸ್ಕರ್​ ಅವರ ಹಸ್ತಮೈಥುನದ ವಿಚಾರ ಈಗ ಮತಜಾಗೃತಿಗೆ ಬಳಕೆಯಾಗಿದೆ. 'ಈ ಚುನಾವಣೆ ಸ್ವರಾ ಭಾಸ್ಕರ್ ರೀತಿಯಲ್ಲ. ನಿಮ್ಮ ಬೆರಳನ್ನು ಬುದ್ಧಿವಂತಿಕೆಯಿಂದ ಬಳಸಿ, ವೋಟ್​ ಹಾಕಿ' ಎಂದು ಬರೆದ ಪ್ಲೇಕಾರ್ಡ್ಸ್​​​ ಮುಂಬೈನಲ್ಲಿ ರಾರಾಜಿಸಿವೆ.

ಚಿತ್ರಕೃಪೆ : ಟ್ವಿಟ್ಟರ್​​

By

Published : Apr 29, 2019, 8:30 PM IST

ಕಳೆದ ವರ್ಷ ಬಾಲಿವುಡ್​ನ 'ವೀರೆ ದಿ ವೆಡ್ಡಿಂಗ್​' ಚಿತ್ರ ಸಖತ್ ಸದ್ದು ಮಾಡಿತ್ತು. ಈ ಚಿತ್ರದಲ್ಲಿಯ ನಟಿ ಸ್ವರಾ ಭಾಸ್ಕರ್​ ಅವರ ಹಸ್ತಮೈಥುನದ ದೃಶ್ಯ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಾಕಷ್ಟು ಟ್ರೋಲ್​ಗೂ ತುತ್ತಾಗಿತ್ತು. ಇಂತಹ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್​​ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.

ಈಗ ಮತ್ತೆ ಈ ಸೀನ್​​ ವಿಚಾರ ಮುನ್ನೆಲೆಗೆ ಬಂದಿದೆ. ಇಂದು ನಡೆದ ಲೋಕಸಭೆಯ ನಾಲ್ಕನೇ ಹಂತದ ಚುನಾವಣೆ ವೇಳೆ ಮತದಾನದ ಜಾಗೃತಿ ಮೂಡಿಸಲು ಸ್ವರಾ ಭಾಸ್ಕರ್​ ಅವರನ್ನು ಎಳೆದು ತರಲಾಗಿದೆ. ಮುಂಬೈನ ಬೀದಿಗಳಲ್ಲಿ ಕೆಲ ಯುವಕ-ಯುವತಿಯರು, 'ಈ ಚುನಾವಣೆ ಸ್ವರಾ ಭಾಸ್ಕರ್ ರೀತಿಯಲ್ಲ. ನಿಮ್ಮ ಬೆರಳನ್ನು ಬುದ್ಧಿವಂತಿಕೆಯಿಂದ ಬಳಸಿ, ವೋಟ್​ ಹಾಕಿ' ಎಂದು ಬರೆದ ಪ್ಲೇಕಾರ್ಡ್​ಗಳನ್ನು ಹಿಡಿದು ಪ್ರತ್ಯಕ್ಷರಾಗಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿವೆ.

ಇನ್ನು ಮತ ಜಾಗೃತಿಗೆ ತಮ್ಮನ್ನು ಬಳಸಿಕೊಂಡಿದ್ದರ ಬಗ್ಗೆ ಸ್ವರಾ ಭಾಸ್ಕರ್​ ಪ್ರತಿಕ್ರಿಯಿಸಿದ್ದಾರೆ. 'ನನ್ನ ಟ್ರೋಲಿಗರು ಮತ್ತೆ ಹಾರ್ಡ್​ವರ್ಕ್ ನಡೆಸುತ್ತಿದ್ದಾರೆ. ನನ್ನ ಹೆಸರು ಪ್ರಖ್ಯಾತಿಗೊಳಿಸಲು ಅವರು ಬೆವರು ಹರಿಸಿ ದುಡಿಯುತ್ತಿದ್ದಾರೆ. ಏ ಹುಡುಗರೇ ನೀವು ತುಂಬಾ ತ್ಯಾಗಮಯಿಗಳು ಎಂದು ಹಾರ್ಟ್​ ಸಿಂಬಲ್​ಗಳನ್ನು ಟ್ವಿಟ್​ ಮಾಡಿದ್ದಾರೆ. ನಾಚಿಕೆಗೇಡು ಹುಡುಗರೇ, ನಿಮ್ಮ ಯೋಚನೆ ಸಂಕುಚಿತವಾಗಿದೆ. ಆದರೆ, ನಿಮ್ಮ ಪ್ರಯತ್ನ ಮೆಚ್ಚುವಂತದ್ದು' ಎಂದು ಹೇಳುವ ಮೂಲಕ ನಯವಾಗಿಯೇ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ABOUT THE AUTHOR

...view details