ಹೈದರಾಬಾದ್ (ತೆಲಂಗಾಣ): ಬಾಲಿವುಡ್ ಚಿತ್ರರಂಗದಲ್ಲಿ ಕೋವಿಡ್ ಸ್ಫೋಟವಾಗಿದೆ. ಹೃತಿಕ್ ರೋಷನ್ ಅವರ ಮಾಜಿ ಪತ್ನಿ, ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್, ನಟ ವೀರ್ ದಾಸ್ ಮತ್ತು ಬೋನಿ ಕಪೂರ್ ಅವರ ಪುತ್ರಿ ಖುಷಿ ಕಪೂರ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸುಸೇನ್ ಖಾನ್ ತಮಗೆ ಒಮಿಕ್ರಾನ್ ತಗುಲಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ. ಕೋವಿಡ್ ಅಬ್ಬರ ಆರಂಭಗೊಂಡು 2 ವರ್ಷಗಳ ನಂತರ ನನಗೆ ಒಮಿಕ್ರಾನ್ ತಗುಲಿದೆ. ಕಳೆದ ರಾತ್ರಿ ಪಾಸಿಟಿವ್ ವರದಿ ಬಂದಿದೆ. ದಯವಿಟ್ಟು ಸುರಕ್ಷಿತವಾಗಿರಿ ಮನವಿ ಮಾಡಿದ್ದಾರೆ.
ಹಾಸ್ಯ ನಟ ವೀರ್ ದಾಸ್ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಸೋಮವಾರ ರಾತ್ರಿ ಪಾಸಿಟಿವ್ ವರದಿ ಬಂದಿದ್ದು, ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದ್ದೇನೆಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಖ್ಯಾತ ಗಾಯಕಿ ಲತಾ ಮಂಗೇಶ್ಕರ್ಗೆ ಕೊರೊನಾ; ಐಸಿಯುಗೆ ದಾಖಲು
ಇನ್ನೂ ಬೋನಿ ಕಪೂರ್ ಪುತ್ರಿ, ಜಾನ್ವಿ ಕಪೂರ್ ಅವರ ಸಹೋದರಿ ಖುಷಿ ಕಪೂರ್ ಅವರಿಗೂ ಕೊರೊನಾ ಅಂಟಿದೆ ಎಂದು ತಿಳಿದು ಬಂದಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ತಿಳಿಸಿಲ್ಲ. ಸದ್ಯ ಹೋಮ್ ಕ್ವಾರಂಟೈನ್ ಆಗಿದ್ದು, ಸಹೋದರಿ ಜಾನ್ವಿ ಕಪೂರ್ ಮತ್ತು ಬೋನಿ ಕಪೂರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.