ಹೈದರಾಬಾದ್ (ತೆಲಂಗಾಣ):ಡೇಟಿಂಗ್ನಲ್ಲಿರುವ ಬಾಲಿವುಡ್ನ ಪ್ರೇಮ ಪಕ್ಷಿಗಳಾದ ಸುಸೇನ್ ಖಾನ್ ಮತ್ತು ಅರ್ಸ್ಲಾನ್ ಗೋನಿ, ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಟರ್ಕಿಯಿಂದ ವಾಪಸಾಗುತ್ತಿದ್ದಂತೆ ಈ ತಾರಾ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟರು.
ಸುಸೇನ್ ಅವರು ಲವ್ ಏಕ್ ತರ್ಫಾ ಎಂಬ ಪ್ರಾಜಕ್ಟ್ ನಿಮಿತ್ತ ಅರ್ಸ್ಲಾನ್ ಅವರೊಂದಿಗೆ ಟರ್ಕಿಗೆ ತೆರಳಿದ್ದರು. ಇಂದು ಇಬ್ಬರು ಮುಂಬೈ ವಿಮಾನ ನಿಲ್ದಾಣದಿಂದ ಹೊರ ಬಂದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಸೇನ್ ಕಪ್ಪು ಬ್ಲೇಜರ್ ಧರಿಸಿದ್ದರೆ, ಅರ್ಸ್ಲಾನ್ ಬಿಳಿ ಗ್ರಾಫಿಕ್ ಟೀ ಶರ್ಟ್ ಮತ್ತು ನೀಲಿ ಬಣ್ಣದ ಡೆನಿಮ್ ಪ್ಯಾಂಟ್ನಲ್ಲಿ ಕಾಣಿಸಿಕೊಂಡರು.
ಈ ತಾರಾ ಜೋಡಿ ಪ್ರೀತಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೇ ರೀತಿ ಸಾಕಷ್ಟು ಬಾರಿ ಒಟ್ಟಾಗಿಯೇ ಕಾಣಿಸಿಕೊಂಡಿದ್ದಾರೆ. ಟರ್ಕಿ ತೆರಳುತ್ತಿರುವಾಗಲೂ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಪರಸ್ಪರ ಬರ್ತ್‌ಡೇ ಸಮಯದಲ್ಲಿಯೂ ಅರ್ಸ್ಲಾನ್ ಗೋನಿ ಹಾಗೂ ಸುಸ್ಸಾನೆ ಖಾನ್ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದರು.