ಹೈದರಾಬಾದ್ : ಚಾಂಪಿಯನ್ಸ್ ಆಫ್ ಚೇಂಜ್ ಎಂಬ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವುದಾಗಿ ಬಾಲಿವುಡ್ ನಟಿಯರಾದ ಹೇಮಾ ಮಾಲಿನಿ ಮತ್ತು ಸುಷ್ಮಿತಾ ಸೇನ್ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣ ಮತ್ತು ಸಾಮಾಜ ಕಲ್ಯಾಣಕ್ಕಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಇನ್ಸ್ಟಾಗ್ರಾಂ ಲೈವ್ ಸೆಷನ್ಲ್ಲಿ ಸುಶ್ಮಿತಾ ತಿಳಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ವಿಷಯಗಳ ಬಗ್ಗೆ ಸದಾ ಧ್ವನಿ ಎತ್ತಿದ ನಟಿ, ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಹೇಳಿದ್ದನ್ನು ವಿವರಿಸಿದ್ದಾರೆ. "ಹೆಣ್ಣಾಗಿ ಜನಿಸುವುದು ದೇವರಿಂದ ದೊರೆತ ದೊಡ್ಡ ಕೊಡುಗೆ. ಆದರೆ, ಮಹಿಳೆ ಸೇವೆಯಲ್ಲಿರುವುದು ಈಗ ಅದೊಂದು ಸವಲತ್ತು" ಎಂದು ಅವರು ಹೇಳಿದ್ದಾರೆ.