ಮುಂಬೈ: ಸಾವಿಗೂ ಮುನ್ನ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ವಿಷ ಸೇವಿಸಿದ್ದರು ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಸಾವಿಗೂ ಮುನ್ನ ಸುಶಾಂತ್ಗೆ ವಿಷಪ್ರಾಶನ: ಸಂಸದ ಸುಬ್ರಮಣಿಯನ್ ಸ್ವಾಮಿ ವಿವಾದಿತ ಹೇಳಿಕೆ - ವಿಷ ಸೇವನೆಯಿಂದ ಸುಶಾಂತ್ ಸಾವನ್ನಪ್ಪಿದ ಕಾರಣ ಮರಣೊತ್ತರ ಪರೀಕ್ಷೆ ತಡ
ನಟ ಸುಶಾಂತ್ ಸಾವಿಗೂ ಮುನ್ನ ಸೇವಿಸಿದ್ದು, ಉದ್ದೇಶಪೂರ್ವಕವಾಗಿಯೇ ಮರಣೋತ್ತರ ಪರೀಕ್ಷೆ ವಿಳಂಬ ಮಾಡಲಾಗಿದೆ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್, ಸಾವಿಗೂ ಮುನ್ನ ಸುಶಾಂತ್ ವಿಷ ಸೇವಿಸಿದ್ದು, ಉದ್ದೇಶಪೂರ್ವಕವಾಗಿಯೇ ಮರಣೋತ್ತರ ಪರೀಕ್ಷೆ ವಿಳಂಬ ಮಾಡಲಾಗಿದೆ. ಶವ ಪರೀಕ್ಷೆ ವಿಳಂಬವಾದ ಕಾರಣ ಹೊಟ್ಟೆಯಲ್ಲಿದ್ದ ವಿಷ ಕರಗಿ ಹೋಗಿದೆ. ಕೊಲೆಗಾರರ ವಿಕೃತ ಮನಸ್ಥಿತಿ ನಿಧಾನವಾಗಿ ಬಹಿರಂಗವಾಗುತ್ತಿದೆ. ಆರೋಪಿಗಳು ಸಿಗುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸುಶಾಂತ್ರ ಮರಣೋತ್ತರ ಪರೀಕ್ಷೆ ತಿರುಚಲಾಗಿದೆ ಎಂಬ ಆರೋಪ ಕೂಪರ್ ಆಸ್ಪತ್ರೆಯ ವೈದ್ಯರ ಮೇಲಿದೆ. ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಸಿಬಿಐ ಈ ಕುರಿತು ತನಿಖೆ ನಡೆಸಬೇಕೆಂದು ನಿನ್ನೆಯಿಂದ ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ.