ಮುಂಬೈ:ಬಾಲಿವುಡ್‌ನ ಉದಯೋನ್ಮುಖ ತಾರೆ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಒಂದು ತಿಂಗಳಾಗಿದೆ. ಅವರ ಸಾವಿನ ಆಘಾತದಿಂದ ಇಡೀ ರಾಷ್ಟ್ರ ಹೊರಬರುತ್ತಿದ್ದಂತೆಯೇ, ನಟಿ ರಿಯಾ ಚಕ್ರವರ್ತಿ ತನ್ನ ವಾಟ್ಸ್ಆ್ಯಪ್ ಡಿಪಿಯಲ್ಲಿ ಸುಶಾಂತ್ರೊಂದಿಗಿನ ಫೊಟೋ ಹಾಕಿಕೊಂಡಿದ್ದಾರೆ.
ನಟಿಗೆ ಹತ್ತಿರವಿರುವ ಮೂಲವೊಂದು ಅವರ ವಾಟ್ಸ್ಆ್ಯಪ್ ಡಿಪಿಯನ್ನು ಶೇರ್ ಮಾಡಿದೆ.
ರಿಯಾ ಚಕ್ರವರ್ತಿ ವಾಟ್ಸ್ಆ್ಯಪ್ ಡಿಪಿ ಸುಶಾಂತ್ ಅವರ ಹಠಾತ್ ನಿಧನಕ್ಕೆ ಸಂಬಂಧಿಸಿದಂತೆ, ರಿಯಾ ಚಕ್ರವರ್ತಿಯನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು.
ಇಬ್ಬರ ನಡುವೆ ವಿನಿಮಯವಾದ ಎಲ್ಲ ಮೆಸೇಜ್ಗಳನ್ನು ತೋರಿಸಲು ರಿಯಾ ಅವರನ್ನು ಕೇಳಲಾಗಿತ್ತು. ಅವರ ಫೋನ್ನಲ್ಲಿರುವ ಎಲ್ಲಾ ಫೋಟೋ ಮತ್ತು ವಿಡಿಯೋಗಳನ್ನು ಒಳಗೊಂಡಂತೆ ಅವರ ಫೋನನ್ನು ಈಗಾಗಲೇ ಸಂಪೂರ್ಣವಾಗಿ ಸ್ಕ್ಯಾನ್ ಮಾಡಲಾಗಿದೆ.