ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ಸುಶಾಂತ್ ಸಾಯುವ ಮುನ್ನ ಸಂಪರ್ಕದಲ್ಲಿದ್ದ ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಸುಶಾಂತ್ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮನೋವೈದ್ಯ ಕೇಸರಿ ಚಾವ್ಡಾ ಅವರನ್ನು ಕೂಡಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೇಸರಿ ಚಾವ್ಡಾ ಹೇಳುವ ಪ್ರಕಾರ ಅಂಕಿತಾ ಲೋಖಂಡೆ ನನ್ನನ್ನು ಪ್ರೀತಿಸುವಂತೆ ಬೇರೆ ಯಾರೂ ಪ್ರೀತಿಸಲಿಲ್ಲ. ಆಕೆಯೊಂದಿಗೆ ಬ್ರೇಕ್ಅಪ್ ಆಗಿದ್ದಕ್ಕೆ ಬಹಳ ಪಶ್ಚಾತಾಪ ಪಡುತ್ತಿರುವುದಾಗಿ ವೈದ್ಯರೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಸುಶಾಂತ್ 'ಪವಿತ್ರ ರಿಶ್ತಾ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಸಹನಟಿ ಅಂಕಿತಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ 6 ವರ್ಷಗಳ ಬಳಿಕ ಇವರ ನಡುವೆ ಬ್ರೇಕ್ ಅಪ್ ಆಯ್ತು. ಇದಾದ ನಂತರ ಸುಶಾಂತ್ 'ರಾಬ್ಟಾ' ಚಿತ್ರದ ಸಹನಟಿ ಕೃತಿ ಸನನ್ ಅವರೊಂದಿಗೆ ರಿಲೇಶನ್ಶಿಪ್ನಲ್ಲಿದ್ದರು ಎನ್ನಲಾಗಿದೆ. ಆದರೆ ಅವರು ಎಂದಿಗೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಹೇಳಿಕೊಂಡಿರಲಿಲ್ಲ.