ಕರ್ನಾಟಕ

karnataka

ETV Bharat / sitara

'ಎಂ.ಎಸ್‌.ಧೋನಿ' ಖ್ಯಾತಿಯ ಸುಶಾಂತ್ ಸಿಂಗ್​ ಸಾವಿಗೆ ಕಂಬನಿ: ಮೋದಿ, ಸಚಿನ್ ಸೇರಿ ಹಲವರಿಂದ ಸಂತಾಪ - ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಯುವ ಮತ್ತು ಪ್ರತಿಭಾನ್ವಿತ ಬಾಲಿವುಡ್ ನಟ ಸುಶಾಂತ್​ ಸಿಂಗ್ ಆತ್ಮಹತ್ಯೆ ಸುದ್ದಿ ಎಲ್ಲರಿಗೂ ಶಾಕ್ ನೀಡಿದ್ದು, ಹಲವಾರು ತಾರೆಯರು ಟ್ವಿಟರ್​ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

Sushant Singh Rajput found hanging
ಸುಶಾಂತ್ ಸಿಂಗ್​ ಸಾವಿಗೆ ತಾರೆಯರ ಕಂಬನಿ

By

Published : Jun 14, 2020, 4:15 PM IST

ಮುಂಬೈ:ಕಿರುತೆರೆಯಿಂದ ಬಣ್ಣದ ಲೋಕ ಎಂಟ್ರಿ ಕೊಟ್ಟು ಬಾಲಿವುಡ್​ನಲ್ಲಿ ಮಿಂಚುತ್ತಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಇಂದು ಸಾವನ್ನಪ್ಪಿದ್ದಾರೆ. ​ಮುಂಬೈನ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, 34ನೇ ವಯಸ್ಸಿಗೆ ಇಹಲೋಕದ ಪಯಣ ಮುಗಿಸಿದ್ದಾರೆ.

ಬಾಲಿವುಡ್​ನಲ್ಲಿ ಇದುವರೆಗೆ 11 ಸಿನಿಮಾಗಳಲ್ಲಿ ನಟಿಸಿದ್ದ ಸುಶಾಂತ್ ಸಿಂಗ್, 'ಎಂ.ಎಸ್ ಧೋನಿ' ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸುಶಾಂತ್ ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರಿಗೂ ಆಘಾತ​ ನೀಡಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಹಲವು ಸಿನಿಮಾ ಮತ್ತು ಕ್ರೀಡಾ ಗಣ್ಯರು ಸುಶಾಂತ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಯುವ ನಟ ಸುಶಾಂತ್ ಸಿಂಗ್ ತುಂಬಾ ಬೇಗ ನಮ್ಮನ್ನ ಅಗಲಿದ್ದಾರೆ. ಟಿವಿ ಮತ್ತು ಸಿನಿಮಾಗಳಲ್ಲಿ ಅವರ ನಟನೆ ಉತ್ತಮವಾಗಿತ್ತು. ಮನರಂಜನಾ ಜಗತ್ತಿನಲ್ಲಿ ಅವರ ಬೆಳವಣಿಗೆ ಅನೇಕರಿಗೆ ಸ್ಫೂರ್ತಿ ನೀಡಿತ್ತು. ಅವರ ನಿಧನದ ಸುದ್ದಿ ಆಘಾತ ತರಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ಸಂಜಯ್​ ದತ್, ಏನನ್ನೂ ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ. ಸುಶಾಂತ್‌ ಸಿಂಗ್‌ ರಾಜಪುತ್ ಅವರ ನಿಧನದ ಬಗ್ಗೆ ಕೇಳಿದಾಗ ಆಘಾತವಾಯಿತು ಎಂದಿದ್ದಾರೆ.

ಸುಶಾಂತ್ ಸಾವಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಯಿತು. ಎಂತಾ ಯುವ ಮತ್ತು ಪ್ರತಿಭಾವಂತ ನಟ ಇವರು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ನಿಧನದ ಬಗ್ಗೆ ಕೇಳಿ ಆಘಾತ ಮತ್ತು ದುಃಖವಾಗಿದೆ. ದೇವರು ಅವರ ಕುಟುಂಬ, ಅಭಿಮಾನಿಗಳು ಮತ್ತು ಪ್ರೀತಿಪಾತ್ರರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಇತ್ತ ಮಲೆಯಾಳಂ ನಟ ದುಲ್ಕರ್ ಸಲ್ಮಾನ್​ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಸುಶಾಂತ್​ರನ್ನು ನಾನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ ಆದರೂ ಈ ಸುದ್ದಿ ಕೇಳಿ ಕರಳು ಕಿವುಚಿದಂತಾಯ್ತು ಎಂದಿದ್ದಾರೆ.

ನಟ ಸುಶಾಂತ್‌ ಸಿಂಗ್ ‌ರಾಜ‌ಪುತ್ ಅವರ ನಿಧನದ ಬಗ್ಗೆ ತಿಳಿದು ಬೇಸರವಾಯಿತು. ಅವರು ಯುವ, ಬಹು-ಪ್ರತಿಭಾನ್ವಿತ ನಟರಾಗಿದ್ದರು. ಅವರು ತಮ್ಮ ವರ್ಚಸ್ಸಿನಿಂದ ಬೆಳ್ಳಿ ಪರದೆಯನ್ನು ಅಲಂಕರಿಸಿದ್ದರು ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details