ಕರ್ನಾಟಕ

karnataka

ETV Bharat / sitara

ಜಾಮೀನು ಕೋರಿ ಅರ್ಜಿ ಸಲ್ಲಿಸಿದ ನಟ ಸುಶಾಂತ್ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ - ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಸಿದ್ಧಾರ್ಥ್ ಪಿಥಾನಿ

ರಜಪೂತ್ ಸಾವಿಗೆ ಸಂಬಂಧಿಸಿದಂತೆ ಮಾದಕವಸ್ತು ಪ್ರಕರಣದಲ್ಲಿ ಪಿಥಾನಿಯನ್ನು ಮೇ 28, 2020 ರಂದು ಹೈದರಾಬಾದ್​ನಲ್ಲಿ ಬಂಧಿಸಲಾಗಿದ್ದ ಸಿದ್ಧಾರ್ಥ್ ಪಿಥಾನಿ ಅವರು ಗುರುವಾರ ಮುಂಬೈ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

Sushant Singh Rajput's flatmate Siddharth Pithani files bail plea
ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ನಟ ಸುಶಾಂತ್ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ

By

Published : Jun 11, 2021, 7:24 PM IST

ಮುಂಬೈ:ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ ಅವರು ಗುರುವಾರ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ರಜಪೂತ್ ಸಾವಿಗೆ ಸಂಬಂಧಿಸಿದಂತೆ ಮಾದಕವಸ್ತು ಪ್ರಕರಣದಲ್ಲಿ ಪಿಥಾನಿಯನ್ನು ಮೇ 28, 2020 ರಂದು ಹೈದರಾಬಾದ್​ನಲ್ಲಿ ಬಂಧಿಸಲಾಗಿತ್ತು. ಜಾಮೀನು ಕೋರಲು ಇತರ ಕಾರಣಗಳಲ್ಲಿದ ಕಾರಣ, ಆರೋಪಿ ಜೂನ್ 26 ರಂದು ಮದುವೆಯಾಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿ, ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ತನ್ನ ವಕೀಲ ತಾರಕ್ ಸಯ್ಯದ್ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ, ಪಿಥಾನಿ ಈ ವಿಷಯದಲ್ಲಿ ತನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.

ಪಿಥಾನಿಯನ್ನು ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಸಬ್​ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್ 27-ಎ (ಅಕ್ರಮ ಸಂಚಾರಕ್ಕೆ ಹಣಕಾಸು ಒದಗಿಸುವುದು ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವುದು) ಅಡಿ ಇತರ ಆರೋಪಗಳನ್ನು ದಾಖಲಿಸಲಾಗಿದೆ.

ನ್ಯಾಯಾಲಯವು ಜೂನ್ 16 ರಂದು ಅರ್ಜಿ ವಿಚಾರಣೆ ನಡೆಸಲಿದೆ. ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಜೂನ್ 14 ರಂದು ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ನಟನ ಮರಣದ ನಂತರ, ಎನ್‌ಸಿಬಿ ವಾಟ್ಸ್​ಆ್ಯಪ್ ಚಾಟ್‌ಗಳ ಆಧಾರದ ಮೇಲೆ ಚಲನಚಿತ್ರೋದ್ಯಮದಲ್ಲಿ ಡ್ರಗ್ ಲಿಂಕ್‌ಗಳ ಬಗ್ಗೆ ತನಿಖೆ ಆರಂಭಿಸಿತು. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು.

ABOUT THE AUTHOR

...view details