ಕರ್ನಾಟಕ

karnataka

ETV Bharat / sitara

ಕೊರೊನಾ ಭೀತಿ ನಡುವೆಯೂ ಪತಿ, ಮಕ್ಕಳೊಂದಿಗೆ ಲಾಸ್ ಏಂಜಲೀಸ್​​​​​ಗೆ ಹಾರಿದ ಸನ್ನಿ ಲಿಯೋನ್ - ಲಾಸ್​ ಏಂಜಲೀಸ್​​ಗೆ ಹಾರಿದ ಸನ್ನಿ ಲಿಯೋನ್

ಮೊನ್ನೆವರೆಗೂ ಕುಟುಂಬದೊಂದಿಗೆ ಮುಂಬೈನಲ್ಲಿ ನೆಲೆಸಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ಲಾಸ್​ ಏಂಜಲೀಸ್​​​ಗೆ ತೆರಳಿದ್ದಾರೆ. ಮಕ್ಕಳ ಸುರಕ್ಷತೆಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸನ್ನಿ ತಿಳಿಸಿದ್ಧಾರೆ.

Sunny Leone
ಸನ್ನಿ ಲಿಯೋನ್

By

Published : May 11, 2020, 10:42 PM IST

ಕೊರೊನಾ ಭೀತಿಯಿಂದ ಸಾಮಾನ್ಯ ಜನರು, ಸೆಲಬ್ರಿಟಿಗಳು ಮನೆಯಲ್ಲಿ ಕ್ವಾರಂಟೈನ್​​​​ನಲ್ಲಿದ್ದರೆ ಬಾಲಿವುಡ್ ನಟಿ ಸನ್ನಿ ಲಿಯೋನ್​ ಮಾತ್ರ ತಮ್ಮ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಲಾಸ್​ ಏಂಜಲೀಸ್​​​ಗೆ ಹಾರಿದ್ಧಾರೆ.

2000 ರಿಂದಲೂ ಮುಂಬೈನಲ್ಲಿ ನೆಲೆಸಿರುವ ಸನ್ನಿ ಲಿಯೋನ್​ ಲಾಕ್​​ಡೌನ್​ ಆರಂಭವಾದಾಗ ಕೂಡಾ ಮುಂಬೈನಲ್ಲೇ ಇದ್ದರು. ಆದರೆ ನಿನ್ನೆ ವಿಶ್ವ ತಾಯಂದಿರ ದಿನದಂದು ಸನ್ನಿ ಲಿಯೋನ್​ ತಮ್ಮ ಮಕ್ಕಳಾದ ನಿಶಾ, ನೋಹಾ ಹಾಗೂ ಅಶೆರ್ ಜೊತೆ ಇರುವ ಫೋಟೋವನ್ನು ತಮ್ಮ ಇನ್ಸ್​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ಧಾರೆ. ಎಲ್ಲರಿಗೂ ಮದರ್ಸ್ ಡೇ ಶುಭ ಕೋರಿ 'ತಾಯಿಯಾಗಿ ನನಗೆ ಏನು ಮಾಡಬೇಕು ಎಂದು ಚೆನ್ನಾಗಿ ತಿಳಿದಿದೆ. ಕಿಲ್ಲರ್ ಕೊರೊನಾ ವೈರಸ್​​​​​​ನಿಂದ ಮಕ್ಕಳು ಸುರಕ್ಷಿತವಾಗಿರುವುದು ನನಗೆ ಮುಖ್ಯ ಆದ್ದರಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ನಾವು ಈಗ ಲಾಸ್​​​ ಏಂಜಲೀಸ್​​​ನಲ್ಲಿ ನೆಲೆಸಿರುವ ಸ್ಥಳ ನಮ್ಮ ಮನೆ ಹಾಗೂ ಸೀಕ್ರೇಟ್ ಗಾರ್ಡನ್​​​​ನಿಂದ ಬಹಳ ದೂರವಿದೆ, ಮಿಸ್​​ ಯು ಅಮ್ಮಾ ' ಎಂದು ಸನ್ನಿ ಲಿಯೋನ್ ಬರೆದುಕೊಂಡಿದ್ದಾರೆ.

ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ಕೂಡಾ ಮೊನ್ನೆ ಇನ್ಸ್​​​ಟಾಗ್ರಾಮ್​​​ನಲ್ಲಿ ತಮ್ಮ ಸೆಲ್ಫಿ ತೆಗೆದು 'ಲಾಕ್​​​ಡೌನ್ ಪಾರ್ಟ್ 2 ' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಯೊಬ್ಬರು ಕೆಎಲ್​​ಎಂ ರಾಯಲ್​​ ಡಚ್​ ಏರ್​ಲೈನ್ಸ್ ಅಥವಾ ಏರ್ ಇಂಡಿಯಾ, ಯಾವ ವಿಮಾನದಲ್ಲಿ ಲಾಸ್​ ಏಂಜಲೀಸ್​​​ಗೆ ತೆರಳಿದಿರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವೆಬರ್ ಕೆಎಲ್​​​ಎಂ ಸರ್ಕಾರಿ ವಿಮಾನ ಎಂದು ರಿಪ್ಲೇ ಮಾಡಿದ್ಧಾರೆ.

ABOUT THE AUTHOR

...view details