ಬಾಲಿವುಡ್ ನಟಿ ಸನ್ನಿ ಲಿಯೋನ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ರಜಾದಿನ ಕಳೆಯಲೆಂದು ಕುಟುಂಬದೊಂದಿಗೆ ಮಾಲ್ಡೀವ್ಸ್ಗೆ ತೆರಳಿರುವ ಅವರು, ಕಡಲ ತೀರದಲ್ಲಿ ಕ್ಲಿಕ್ಕಿಸಿರುವ ಫೋಟೋಗಳನ್ನು ಇನ್ಸ್ಟಾಗೆ ಅಪ್ಲೋಡ್ ಮಾಡಿದ್ದಾರೆ.
ಮಾಲ್ಡೀವ್ಸ್ ಬೀಚ್ನಲ್ಲಿ ‘ನೀಲಿ’ ಬಿಕಿನಿಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್: Video - Sunny Leone Bhima Koregaon
ನಟಿ ಸನ್ನಿಲಿಯೋನ್ ಮಾಲ್ಡೀವ್ಸ್ ಪ್ರವಾಸದಲ್ಲಿದ್ದು, ಅಲ್ಲಿನ ಕಡಲತೀರದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್ಸ್ಟಾಗೆ ಅಪ್ಲೋಡ್ ಮಾಡಿದ್ದಾರೆ.
ಸನ್ನಿ ಲಿಯೋನ್
ಮಾಲ್ಡೀವ್ಸ್ನ ಬಹುವೆಲಿಯ ಸನ್ ಸಿಯಮ್ ರೆಸಾರ್ಟ್ನಲ್ಲಿ ತಂಗಿರುವ ಸನ್ನಿ, ಕಡಲ ತೀರದಲ್ಲಿ, ನೀಲಿಬಣ್ಣದ ಬಿಕಿನಿ ಧರಿಸಿ ಹಿಂದೆ ನೀಲಾಕಾಶ ಕಾಣಿಸುವ ರೀತಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಪತಿ ಡೇನಿಯಲ್ ವೆಬರ್, ಮಕ್ಕಳದಾದ ನಿಶಾ, ಏಶರ್ ಮತ್ತು ನೋಹ್ ಜತೆ ಸನ್ನಿ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ.