ಬಾಲಿವುಡ್ ನಟಿ ಸನ್ನಿಲಿಯೋನ್ ತನ್ನ ಪತಿ ಡೇನಿಯಲ್ ವೆಬರ್ನನ್ನು ಹಾಡಿ ಹೊಗಳಿದ್ದಾರೆ. ಅಷ್ಟಕ್ಕೂ ಡೇನಿಯಲ್ ವೆಬರ್ ಮಾಡಿದ ಅಂಥಾಒಳ್ಳೆ ಕೆಲಸ ಏನುಎಂದುಅಭಿಮಾನಿಗಳಿಗೆ ಕುತೂಹಲ ಮೂಡುವುದು ಸಹಜ. ಡೇನಿಯಲ್ ವೆಬರ್, ಸನ್ನಿಯನ್ನು ಪ್ರಪೋಸ್ ಮಾಡಿ ಮದುವೆಯಾದದ್ದೇ ಸನ್ನಿಗೆ ದೊಡ್ಡ ಉಡುಗೊರೆಯಂತೆ.
ಪತಿಯನ್ನು ಹಾಡಿ ಹೊಗಳಿದ ಸನ್ನಿ ಬೇಬಿ.. ಅಷ್ಟಕ್ಕೂ ಡೇನಿಯಲ್ ಮಾಡಿದ ಕೆಲಸ ಏನು? - ಪತಿ ಡೇನಿಯಲ್ ವೆಬರ್ ಬರ್ತಡೇ ಆಚರಿಸಿದ ಸನ್ನಿ ಲಿಯೋನ್
ತನ್ನ ಪತಿ ಡೇನಿಯಲ್ ಹುಟ್ಟುಹಬ್ಬದಂದು ಆತನ ಜೊತೆ ಇರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿರುವ ಸನ್ನಿ ಲಿಯೋನ್ ಪತಿಯನ್ನು ಹಾಡಿ ಹೊಗಳಿದ್ದಾರೆ.

ನಿನ್ನೆ ಡೇನಿಯಲ್ ವೆಬರ್ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಮೂವರು ಮಕ್ಕಳು, ಸ್ನೇಹಿತರು ಹಾಗೂ ಕೆಲಸಗಾರರೊಂದಿಗೆ ಪತಿ ಹುಟ್ಟುಹಬ್ಬವನ್ನು ಸನ್ನಿ ಆಚರಿಸಿದ್ದಾರೆ. ಡೇನಿಯಲ್ ಜೊತೆ ಇರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಿರುವ ಸನ್ನಿ ಲಿಯೋನ್, ಪತಿಯನ್ನು ಹಾಡಿಹೊಗಳಿದ್ದಾರೆ.'ನಾವಿಬ್ಬರೂ ಭೇಟಿಯಾಗಿ ಇಷ್ಟು ವರ್ಷಗಳಾದರೂ ನಿನ್ನನ್ನು ಅದೇ ರೀತಿ ಪ್ರೀತಿಸುತ್ತಿದ್ದೇನೆ. ನಿನ್ನ ಮೇಲೆ ನನಗೆ ಅಷ್ಟು ಪ್ರೀತಿ ಎಂದರೆ ನನಗೆ ನಂಬಿಕೆ ಬರುತ್ತಿಲ್ಲ. ನೀನು ಎಲ್ಲರನ್ನೂ ಪ್ರೀತಿಯಿಂದ ಕಾಣುವ ಹೃದಯವಂತ. ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತ ವ್ಯಕ್ತಿತ್ವದ ತಂದೆ ಹಾಗೂ ಪತಿ. ನನ್ನ ಲವ್ಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಸನ್ನಿ ಬರೆದುಕೊಂಡಿದ್ದಾರೆ. ಇದರೊಂದಿಗೆ ಮತ್ತೊಂದು ಫೋಟೋ ಅಪ್ಲೋಡ್ ಮಾಡಿ ತಮ್ಮ ಕುಟುಂಬ ಹಾಗೂ ಸ್ನೇಹಿತರ ಬಗ್ಗೆ ಹೇಳಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಿಸಿದ ಪತ್ನಿ, ಸ್ನೇಹಿತರು ಹಾಗೂ ಶುಭ ಕೋರಿದ ಎಲ್ಲರಿಗೂ ಡೇನಿಯಲ್ ಕೂಡಾ ಧನ್ಯವಾದ ಹೇಳಿದ್ದಾರೆ.