ಕರ್ನಾಟಕ

karnataka

ETV Bharat / sitara

ಮಾಲ್ಡೀವ್ಸ್​ಗೆ ಹಾರಿದ ಸನ್ನಿ ಲಿಯೋನ್​​​: ಬಿಕಿನಿಯಲ್ಲಿ ಸೂರ್ಯನಿಗೆ ಮೈಯೊಡ್ಡಿದ ನಟಿ - ಬಿಕಿನಿ ಫೋಟೋಗಳನ್ನು ಶೇರ್​ ಮಾಡಿದ ಸನ್ನಿ

ಸನ್ನಿ ಕುಟುಂಬವನ್ನು ಬಿಟ್ಟು ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡುತ್ತಿದ್ದು, ಗ್ಲಾಮರ್​ ಫೋಟೋಗಳನ್ನುಸೋಷಿಯಲ್​ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

sunny leone sexy pictures
ಸನ್ನಿ ಲಿಯೋನ್ ಹಾಟ್​ ಫೋಟೋಸ್

By

Published : Mar 22, 2022, 9:29 AM IST

ಮುಂಬೈ: ಸನ್ನಿ ಲಿಯೋನ್ ಬಾಲಿವುಡ್‌ ಗ್ಲಾಮರ್ ಬ್ಯೂಟಿ, ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಕುಟುಂಬವನ್ನು ಬಿಟ್ಟು ಸಿಂಗಲ್​ ಆಗಿ ಎಂಜಾಯ್​ ಮಾಡಲು ಮಾಲ್ಡೀವ್ಸ್​ಗೆ ಹಾರಿದ್ದಾರೆ.

ಹಲವು ಸಿನಿಮಾ ಸೆಲೆಬ್ರಿಟಿಗಳು ರಜಾದಿನಗಳನ್ನು ಕಳೆಯಲು ಮಾಲ್ಡೀವ್ಸ್‌ಗೆ ಹೋಗುವುದು ಸಾಮಾನ್ಯವಾಗಿದೆ. ಬಳಿಕ ಅಲ್ಲಿಯ ಸೌಂದರ್ಯ ತಾಣದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ. ಈಗ ಸನ್ನಿ ಲಿಯೋನ್​ ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದು, ಜಾಲಿ ಮೂಡ್​ನಲ್ಲಿದ್ದಾರೆ. ಸದ್ಯ ಅಲ್ಲಿನ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಮಾಲ್ಡೀವ್ಸ್​ಗೆ ಹಾರಿದ ಸನ್ನಿ ಲಿಯೋನ್

'ಈ ಸ್ವರ್ಗದಲ್ಲಿ ಯಾವುದೇ ಫಿಲ್ಟರ್ ಅಗತ್ಯವಿಲ್ಲ' ಎಂಬ ಶೀರ್ಷಿಕೆ ನೀಡಿ ಮಾಲ್ಡೀವ್ಸ್‌ನಲ್ಲಿ ತೆಗೆದ ಕೆಲವು ಮನ ಮೋಹಕ ಫೋಟೋಗಳು ಇನ್​ಸ್ಟಾಗ್ರಾಮ್​ನಲ್ಲಿ ಸನ್ನಿ ಶೇರ್​ ಮಾಡಿದ್ದಾರೆ. ಬಣ್ಣ ಬಣ್ಣದ ಬಿಕಿನಿ ತೊಟ್ಟು ಸೂರ್ಯನಿಗೆ ಮೈಯೊಡ್ಡಿ ಚಿತ್ರಗಳಿಗೆ ಫೋಸ್​ ನೀಡಿದ್ದಾರೆ. ಸನ್ನಿ ಗ್ಲಾಮರ್​ಗೆ ಅಭಿಮಾನಿಗಳು ಕಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್​ಸ್ಟಾದಲ್ಲಿ ಸನ್ನಿ 51.2 ಮಿಲಿಯನ್​​ ಫಾಲೋವರ್ಸ್​ ಹೊಂದಿದ್ದಾರೆ.

ಸದ್ಯ ಸನ್ನಿ ಲಿಯೋನ್ ಶೇರೋ, ಒ ಮೈ ಗೋಸ್ಟ್​ ಚಿತ್ರಗಳಲ್ಲಿ ನಟಿಸುತ್ತಿದ್ದು, ಸಿನಿಮಾವನ್ನ ಹೊಸ ನಿರ್ಮಾಣ ಸಂಸ್ಥೆ IKIGAI ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಶ್ರೀಜಿತ್ ವಿಜಯನ್ ನಿರ್ದೇಶಿಸುತ್ತಿರುವ ಸನ್ನಿ ಲಿಯೋನ್ ಶೇರೋ ಚಿತ್ರ ಮಲಯಾಳಂನ ಚಿತ್ರವಾಗಿದೆ. ಶೇರೋ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು ಹಿಂದಿಯಲ್ಲಿ ಕೊ ಕೊ ಕೋಲಾ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಬ್ಯಾಟಲ್​ ಆಫ್​​ ಕೊರೆಗಾಂ​ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬಾಂದ್ರಾ ಕಚೇರಿಯ ಹೊರಗೆ ಕಾಣಿಸಿಕೊಂಡ ಬಾಲಿವುಡ್​​ ಬೆಡಗಿ ಕಂಗನಾ ರಣಾವತ್


ABOUT THE AUTHOR

...view details