ಮುಂಬೈ:ವಿಕ್ರಮ್ ಭಟ್ ನಿರ್ದೇಶನದ 'ಅನಾಮಿಕಾ' ಚಿತ್ರದ ಮೂಲಕ ನಟಿ ಮತ್ತು ಟಿವಿ ನಿರೂಪಕಿ ಸನ್ನಿ ಲಿಯೋನ್ ತನ್ನ ಚೊಚ್ಚಲ ಒಟಿಟಿ ಚಿತ್ರಕ್ಕೆ ಸಿದ್ಧರಾಗಿದ್ದಾರೆ.
'ಜಿಸ್ಮ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಸನ್ನಿ ಲಿಯೋನ್ 'ಏಕ್ ಪಹೇಲಿ ಲೀಲಾ', 'ಮಸ್ತಿಜಾದೆ', 'ಒನ್ ನೈಟ್ ಸ್ಟ್ಯಾಂಡ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
'ಅನಾಮಿಕಾ' ವೆಬ್ ಸರಣಿ ಬಗ್ಗೆ ಮಾತನಾಡಿದ ನಟಿ ಸನ್ನಿ ಲಿಯೋನ್, ಇದು ನನಗೆ ತುಂಬಾ ವಿಶೇಷವಾದ ಚಿತ್ರವಾಗಿದೆ. ನಾನು ನಿಜವಾಗಿಯೂ 'ಅನಾಮಿಕಾ' ಜೊತೆ ಭಾವನಾತ್ಮಕವಾಗಿ ಹೊಂದಿಕೊಂಡಿದ್ದೇನೆ. ಪ್ರೇಕ್ಷಕಳಾಗಿ ನಾನು ಆಕ್ಷನ್-ಡ್ರಾಮಾ ಶೋಗಳನ್ನು ವೀಕ್ಷಿಸಲು ಇಷ್ಟಪಡುತ್ತೇನೆ. ಈ ವೆಬ್ ಸರಣಿ ಎರಡನ್ನೂ ಮಾಡಲು ನನಗೆ ಅವಕಾಶವನ್ನು ನೀಡಿದೆ. ಈ ಶೋ ನನ್ನ 2.0 ಆವೃತ್ತಿಯಂತಿದೆ ಎಂದಿದ್ದಾರೆ.