ಪಂಜಾಬ್:ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ದಾಖಲು ಮಾಡಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ಗೆ ಸಂಕಷ್ಟವೊಂದು ಎದುರಾಗಿದೆ.
ಬಿಜೆಪಿ ಸಂಸದ ಸನ್ನಿ ಡಿಯೋಲ್ಗೆ ನೋಟಿಸ್... ಮಿತಿ ಮೀರಿ ಖರ್ಚು ಮಾಡಿದ್ದೇ ನಟನಿಗೆ ಶಾಪ!
ಲೋಕಸಭಾ ಚುನಾವಣೆಯಲ್ಲಿ ನಿಗದಿ ಮಾಡಿದ್ದಕ್ಕಿಂತ ಅಧಿಕ ಹಣ ವ್ಯಯ ಮಾಡಿದ್ದಕ್ಕಾಗಿ ಬಿಜೆಪಿ ಸಂಸದ ಸನ್ನಿ ಡಿಯೋಲ್ಗೆ ನೋಟಿಸ್ ಜಾರಿಯಾಗಿದೆ.
ಸನ್ನಿ ಡಿಯೋಲ್
ಲೋಸಕಭಾ ಚುನಾವಣೆಯಲ್ಲಿ ಆಯೋಗ ನಿಗದಿಪಡಿಸಿದ್ದ ಹಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಿದ್ದರಿಂದ ಗುರುದಾಸ್ಪುರ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಉಜ್ವಲ್ ನೋಟಿಸ್ ಜಾರಿ ಮಾಡಿದ್ದು, ಚುನಾವಣೆಗಾಗಿ ವ್ಯಯ ಮಾಡಿರುವ ಹಣದ ಕುರಿತು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗಾಗಿ, ಆಯೋಗ 70ಲಕ್ಷ ರೂ ನಿಗದಿ ಮಾಡಿದೆ. ಆದರೆ, ಸನ್ನಿ ಡಿಯೋಲ್ 86 ಲಕ್ಷ ರೂ ಚುನಾವಣೆಗಾಗಿ ಖರ್ಚು ಮಾಡಿದ್ದಾರೆಂದು ತಿಳಿದು ಬಂದಿರುವ ಕಾರಣ ಈ ನೋಟಿಸ್ ಜಾರಿಯಾಗಿದ್ದು, ಉತ್ತರ ನೀಡುವಂತೆ ತಿಳಿಸಿದೆ.