ಕರ್ನಾಟಕ

karnataka

ETV Bharat / sitara

ಟೀಸರ್ ಪೋಸ್ಟರ್ ಹಂಚಿಕೊಂಡ ನಟ ಸನ್ನಿ ಡಿಯೋಲ್​; ಇದು 'ಗದರ್ 2' ಖದರ್​​​​​! - Sunny Deol announces Gadar 2 Poster

ಸನ್ನಿಯ ಬ್ಲಾಕ್ ಬಾಸ್ಟರ್ ಚಿತ್ರ 'ಗದರ್' ನಲ್ಲಿ 'ಏಕ್ ಪ್ರೇಮ್ ಕಥಾ' ಎಂಬ ಟ್ಯಾಗ್ ಲೈನ್ ಕೂಡ ಇತ್ತು. ಹೀಗಾಗಿ, ಈ ಪೋಸ್ಟರ್​ ಗಮನಿಸಿದ ಅಭಿಮಾನಿಗಳು ಇದು ಅವರ ಮುಂಬರುವ ಚಿತ್ರ 'ಗಾದರ್ 2' ಆಗಿದೆ ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ.

sunny-deol-announces-gadar-2-poster-to-be-released-on-dussehra
ಟೀಸರ್ ಪೋಸ್ಟರ್ ಹಂಚಿಕೊಂಡ ನಟ ಸನ್ನಿ ಡಿಯೋಲ್

By

Published : Oct 14, 2021, 4:01 PM IST

ಹೈದರಾಬಾದ್​: ಬಾಲಿವುಡ್ ನಟ ಸನ್ನಿ ಡಿಯೋಲ್ ತಮ್ಮ ಮುಂದಿನ ಸಿನೆಮಾದ ಪೋಸ್ಟರ್​ ಅನ್ನು ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ಸಹಜವಾಗಿಯೇ ಇದು ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ನಟ ತಮ್ಮ ಟ್ವಿಟರ್ ಖಾತೆಯಲ್ಲಿ ಸಿನಿಮಾವೊಂದರ ಪೋಸ್ಟರ್​ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ '2' ಎಂಬ ಸಂಖ್ಯೆ ಬರೆಯಲಾಗಿದೆ. ಇದು ಹಿಂದಿನ ಚಿತ್ರದ ಎರಡನೇ ಭಾಗ ಎಂದು ಸೂಚಿಸುತ್ತದೆ. ಅದರ ಮೇಲೆ 'ಕಥೆಯು ಮುಂದುವರಿಯುತ್ತದೆ ...' ಎಂಬ ಒಂದು ಸಾಲು ಕೂಡ ಇದೆ.

ಸನ್ನಿಯ ಬ್ಲಾಕ್ ಬಾಸ್ಟರ್ ಚಿತ್ರ 'ಗದರ್' ನಲ್ಲಿ 'ಏಕ್ ಪ್ರೇಮ್ ಕಥಾ' ಎಂಬ ಟ್ಯಾಗ್ ಲೈನ್ ಕೂಡ ಇತ್ತು. ಹೀಗಾಗಿ, ಈ ಪೋಸ್ಟರ್​ ಗಮನಿಸಿದ ಅಭಿಮಾನಿಗಳು ಇದು ಅವರ ಮುಂಬರುವ ಚಿತ್ರ 'ಗದರ್ 2' ಆಗಿದೆ ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ.

ಪೋಸ್ಟರ್ ಜೊತೆ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ. 'ನಾಳೆ ಬೆಳಗ್ಗೆ 11 ಗಂಟೆಗೆ ನನ್ನ ಹೃದಯಕ್ಕೆ ತುಂಬಾ ವಿಶೇಷವಾದ ಮತ್ತು ಹತ್ತಿರ ಇರುವ ಸಂಗತಿಯನ್ನು ಘೋಷಿಸಲಿದ್ದೇನೆ. ಈ ಜಾಗವನ್ನು ವೀಕ್ಷಿಸಿ' ಎಂದು ಬರೆದುಕೊಂಡಿದ್ದಾರೆ.

ಸಿನೆಮಾದ ಮೊದಲ ಭಾಗದಂತೆಯೇ, ಎರಡನೆ ಭಾಗವೂ ಭಾರತ -ಪಾಕಿಸ್ತಾನ ಸಂಘರ್ಷದ ದೃಶ್ಯಗಳನ್ನು ಒಳಗೊಂಡಿರಲಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನವೆಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ಸಜ್ಜಾಗಿದ್ದಾರೆ.

ಓದಿ:ಸವಾರಿ ತೊಟ್ಟಿಯಲ್ಲಿ ಯದುವೀರ್​ರಿಂದ ಸಾಂಪ್ರದಾಯಿಕ ಆಯುಧ ಪೂಜೆ

ABOUT THE AUTHOR

...view details