ಕರ್ನಾಟಕ

karnataka

ETV Bharat / sitara

ತೆಲುಗು ಹಿಟ್​​​ ಚಿತ್ರದ ಹಿಂದಿ ರೀಮೇಕ್ ಮೂಲಕ ಸುನಿಲ್ ಶೆಟ್ಟಿ ಪುತ್ರನ ಬಾಲಿವುಡ್ ಎಂಟ್ರಿ - ಆರ್​​ಎಕ್ಸ್ 100 ರೀಮೇಕ್ ತಡಪ್

ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ 'ತಡಪ್' ಚಿತ್ರದ ಮೂಲಕ ಬಾಲಿವುಡ್​​ಗೆ ಪಾದಾರ್ಪಣೆ ಮಾಡಿದ್ದಾರೆ. 2018 ರಲ್ಲಿ ಬಿಡುಗಡೆ ಆದ ತೆಲುಗಿನ 'ಆರ್​​ಎಕ್ಸ್​100' ರೀಮೇಕ್ ಇದಾಗಿದ್ದು ಮಿಲನ್ ಲುತ್ರಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Suniel Shetty
ಸುನಿಲ್ ಶೆಟ್ಟಿ

By

Published : Mar 2, 2021, 2:04 PM IST

ಹೈದರಾಬಾದ್: 80-90 ರ ದಶಕದಲ್ಲಿ ಬಾಲಿವುಡ್​ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ನಟ-ನಟಿಯರ ಮಕ್ಕಳು ಕೂಡಾ ಈಗ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಕೂಡಾ ಬಾಲಿವುಡ್​​ಗೆ ಎಂಟ್ರಿ ನೀಡಿದ್ದು 'ತಡಪ್​​​' ಚಿತ್ರದ ಮೂಲಕ ಸಿನಿಕರಿಯರ್ ಆರಂಭಿಸುತ್ತಿದ್ದಾರೆ.

'ತಡಪ್' ಪೋಸ್ಟರ್

'ತಡಪ್' ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದ್ದು ಸೆಪ್ಟೆಂಬರ್ 24 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. 'ತಡಪ್' , 2018 ರಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹಿಟ್ ಎನಿಸಿಕೊಂಡ 'ಆರ್​​ಎಕ್ಸ್​100' ಚಿತ್ರದ ರೀಮೇಕ್ ಆಗಿದೆ. ಈ ಚಿತ್ರದಲ್ಲಿ ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ 'ತಡಪ್' ಚಿತ್ರದಲ್ಲಿ ಅಹಾನ್ ಶೆಟ್ಟಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸುತ್ತಿದ್ದಾರೆ. ಸಿಖಂದರ್ ಖೇರ್, ಶರತ್​ ಸಕ್ಸೇನಾ, ಸುನಿಲ್ ಶೆಟ್ಟಿ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅಹಾನ್ ಶೆಟ್ಟಿ

ಇದನ್ನೂ ಓದಿ:ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದ ಬಾಲಿವುಡ್​ ತಾರೆಯರು

ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ನಾದಿಯಾವಾಲಾ ಗ್ರ್ಯಾಂಡ್​​ಸನ್ ಎಂಟರ್​​ಟೈನ್ಮೆಂಟ್ ಬ್ಯಾನರ್​​ನಲ್ಲಿ ಮಿಲನ್ ಲುತ್ರಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರೀತಮ್ ಸಂಗೀತ ನೀಡುತ್ತಿದ್ದಾರೆ. ಹರ್ಷವರ್ಧನ್ ಹಾಗೂ ರಾಮೇಶ್ವರ್​ ಹಿನ್ನೆಲೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಹಾನ್ ಶೆಟ್ಟಿಯನ್ನು ಸಿನಿಪ್ರಿಯರು ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕು.

ABOUT THE AUTHOR

...view details