ಮುಂಬೈ: ಗಾಯಕಿ, ಗೀತೆ ಸಂಯೋಜಕಿ ಪಾಯಲ್ ದೇವ್, ಹಿನ್ನೆಲೆ ಗಾಯಕಿ ಸುಕೃತಿ ಹಾಗೂ ಪ್ರಕೃತಿ ಕಾಕರ್ ಇದೇ ಮೊದಲ ಬಾರಿ ತ್ರಿಬಲ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ 'ಸಿಂಗಲ್ ಸೈಯಾನ್' ಹಾಡು ರಿಲೀಸ್ ಆಗಿದೆ. ಎಲ್ಲ ನವವಿವಾಹಿತರಿಗಾಗಿ, ಹೃದಯಸ್ಪರ್ಶಿ ಪ್ರೇಮ ಕಥೆ ಹೊಂದಿರುವ ಹಾಡಿನ ವಿಡಿಯೋದಲ್ಲಿ ಅವಳಿ ಮಕ್ಕಳೊಂದಿಗೆ ನಟ ಪಾರ್ಥ್ ಸಮತಾನ್ ನಟಿಸಿದ್ದಾರೆ.
ಹಾಡು ಬಿಡುಗಡೆ ವೇಳೆ ಮಾತನಾಡಿದ ಸುಕೃತಿ, ಪ್ರಕೃತಿ ಕಾಕರ್, ಹಾಡಿನ ರಚನೆಯ ಸಂಪೂರ್ಣ ಪ್ರಕ್ರಿಯೆಯನ್ನು ಸಖತ್ ಎಂಜಾಯ್ ಮಾಡಿದ್ದೇವೆ. ವಿಶೇಷವಾಗಿ ಪ್ರತಿಭಾವಂತ ಪಾಯಲ್ ದೇವ್ ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ತಂದಿದ್ದು, ಉತ್ತಮ ವ್ಯಕ್ತಿದ ದೇವ್ ಅವರೊಟ್ಟಿಗೆ ಇದು ನಮ್ಮ ಮೊದಲ ಸಹಯೋಗವಾಗಿದೆ ಎಂದು ಹೇಳಿದ್ದಾರೆ.
ನಟ ಪಾರ್ಥ್ ಸಮತಾನ್ ಅವರೊಂದಿಗೆ ಕೆಲಸ ಮಾಡಿರುವುದು ಸಂತಸ ತಂದಿದೆ. ಹಾಡಿನ ಚಿತ್ರೀಕರಣದಲ್ಲಿ ಉತ್ತಮ ಸಮಯವನ್ನು ಕಳೆದಿದ್ದೇವೆ. ವಧು ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಸಿಂಗಲ್ ಸೈಯಾನ್ ಹಾಡು ಒಂದು ಶುದ್ಧ ಔತಣವಾಗಿದೆ ಎಂದಿದ್ದಾರೆ.