ನವದೆಹಲಿ:ಸುಹಾನಾ ಖಾನ್ ಮತ್ತು ಶನಯಾ ಕಪೂರ್ ಬಾಲಿವುಡ್ ಸ್ಟಾರ್ ಕಿಡ್ಗಳು, ಜೊತೆಗೆ ಆತ್ಮೀಯ ಸ್ನೇಹಿತರು. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಫೋಟೋ ಹಾಕಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಶನಯಾ ಪೋಸ್ಟ್ಗೆ ಸುಹಾನಾ ಹೊಗಳಿದ್ದಾರೆ.
ಶನಯಾ ಕಪೂರ್ ಭಾನುವಾರ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳಿಗೆ ಹಸಿರು ಬಣ್ಣದ ಹಾಟ್ ಎಮೋಜಿಯನ್ನು ಶೀರ್ಪಿಕೆಯಾಗಿ ನೀಡಿದ್ದಾರೆ.
ಫೋಟೋಸ್ಗಳಲ್ಲಿ ಶನಯಾ ಹಸಿರು ಬಣ್ಣದ ಡ್ರೆಸ್ ತೊಟ್ಟಿದ್ದು, ರಾತ್ರಿಯಲ್ಲಿ ಗಾಜಿನ ಬಾಲ್ಕನಿಯ ಪಕ್ಕದಲ್ಲಿ ಪೋಸ್ ನೀಡಿದ್ದಾಳೆ. ಮಗಳ ಪೋಸ್ಟ್ಗೆ ತಾಯಿ ಮಹೀಪ್ ಕಪೂರ್, ಕಮೆಂಟ್ ಮಾಡಿ ಕೆಂಪು ಬಣ್ಣದ ಹೃದಯದ ಎಮೋಜಿ ನೀಡಿದ್ದಾರೆ. ಇತ್ತ ಅನನ್ಯಾ ಪಾಂಡೆ ಅವರ ತಾಯಿ ಭಾವನಾ ಪಾಂಡೆ ಕೂಡ ಹೃದಯ ಮತ್ತು ಬೆಂಕಿಯ ಎಮೋಜಿಗಳನ್ನು ನೀಡಿದ್ದಾರೆ.