ಹೈದರಾಬಾದ್ (ತೆಲಂಗಾಣ): ಬಾಲಿವುಡ್ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಇದರ ಬೆನ್ನಲೆ ಮನೀಶ್ ಮಲ್ಹೋತ್ರಾ ಅವರು ಸುಹಾನಾ ಖಾನ್ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದು ಸಖತ್ ಸುದ್ದಿಯಾಗುವುದರ ಜೊತೆಗೆ ಅಭಿಮಾನಿಗಳು ಮತ್ತು ತಾಯಿ ಗೌರಿ ಖಾನ್ ಇದನ್ನು ಮೆಚ್ಚಿಕೊಂಡಿದ್ದಾರೆ.
ಮನೀಶ್ ಮಲ್ಹೋತ್ರಾ ಅವರು, ಸುಹಾನಾ ಅವರ ಮೂರು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಬಿಳಿ ಲೆಹೆಂಗಾವನ್ನು ಧರಿಸಿದ್ದು, ಇದರಲ್ಲಿ ದೇಸಿ ಹುಡುಗಿ ತರ ಕಾಣುತ್ತಿದ್ದಾರೆ.
ಸುಹಾನಾ ಮಲ್ಹೋತ್ರಾ ಅವರ ಕ್ಲಾಸಿಕ್ ಬಿಳಿ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದು, ಅದರ ಜೊತೆಗೆ ಬ್ರ್ಯಾಲೆಟ್ ಚೋಲಿಯನ್ನು ಹಾಕಿಕೊಂಡಿದ್ದಾರೆ. ಕಡಿಮೆ ಮೇಕ್ಅಪ್ ಮಾಡಿದ್ದು, ಚಿಕ್ಕದಾಗಿ ಹಣೆಗೆ ಬಿಂದಿಯನ್ನು ಇಟ್ಟಿದ್ದಾರೆ. ಅಲ್ಲದೇ ಕಿವಿಗೆ ಓಲೆಯನ್ನು ಹಾಕಿದ್ದು, ಈ ಒಂದು ಫೋಟೋದಲ್ಲಿ 21ವರ್ಷದ ಸುಹಾನಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.