ಮುಂಬೈ (ಮಹಾರಾಷ್ಟ್ರ):ಎಂಟು ವರ್ಷಕ್ಕೆ ಕಾಲಿಟ್ಟ ನಟ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಕಿರಿಯ ಮಗ ಅಬ್ರಾಮ್ ಖಾನ್ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
8ನೇ ವರ್ಷಕ್ಕೆ ಕಾಲಿಟ್ಟ ಅಬ್ರಾಮ್ ಖಾನ್: ಭಾವನಾತ್ಮಕ ವಿಡಿಯೋ ಶೇರ್ ಮಾಡಿದ ಅಕ್ಕ ಸುಹಾನಾ ಖಾನ್ - ನಟ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಕಿರಿಯ ಮಗ ಅಬ್ರಾಮ್ ಖಾನ್
ಶಾರುಖ್ ಖಾನ್ ಪುತ್ರ ಅಬ್ರಾಮ್ ಖಾನ್ ಎಂಟನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಈ ವಿಶೇಷ ದಿನವನ್ನು ನೆನೆಯಲು ಅಕ್ಕ ಸುಹಾನಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾಳೆ.
suhana-khan-ananya-panday-shower-heartwarming-wishes-as-abram-khan-turns-8
ಈ ಸುಸಂದರ್ಭದಲ್ಲಿ ಅಬ್ರಾಮ್ ಖಾನ್ ಸಹೋದರಿ ಸುಹಾನಾ ಖಾನ್ ಮತ್ತು ಅವಳ ಸ್ನೇಹಿತ ಅನನ್ಯಾ ಪಾಂಡೆ ಹೃದಯಸ್ಪರ್ಶಿ ಶುಭಾಶಯಗಳನ್ನು ತಿಳಿಸಿದ್ದಾರೆ.
'ಬಾದ್‌ಶಾ' ನಟನ ಕಿರಿಯ ಮಗನಿಗೆ ಅಕ್ಕ ಸುಹಾನಾ ಖಾನ್ ವಿಡಿಯೋ ಮೂಲಕ ತಮ್ಮನಿಗೆ ಶುಭಾಶಯ ತಿಳಿಸಿದ್ದಾಳೆ. ವಿಡಿಯೋದಲ್ಲಿ ಅಬ್ರಾಮ್ ಖಾನ್ನ ಫೋಟೋಗಳನ್ನು ಬಳಕೆ ಮಾಡಿ ಭಾವನಾತ್ಮಕ ವಿಡಿಯೋ ಮೂಲಕ ಶುಭ ಕೋರಿದ್ದಾಳೆ. ಈ ವಿಡಿಯೋ ಇವರಿಬ್ಬರ ಮುದ್ದಾದ ಅನ್ಯೋನ್ನತೆಯನ್ನು ತೋರಿಸುತ್ತದೆ.