ನಿನ್ನೆ ಸುಶಾಂತ್ ಸಿಂಗ್ ರಜಪೂತ್ 35 ನೇ ವರ್ಷದ ಜನ್ಮದಿನೋತ್ಸವ. ಲಕ್ಷಾಂತರ ಅಭಿಮಾನಿಗಳು ಮೆಚ್ಚಿನ ನಟನನ್ನು ಸ್ಮರಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಸುಶಾಂತ್ ಇರಬಾರದಿತ್ತಾ ಎಂದು ದು:ಖ ಪಟ್ಟವರು ಕೂಡಾ ಅನೇಕ ಮಂದಿ. ಅಭಿಮಾನಿಗಳು ಫೇಸ್ಬುಕ್ ಸ್ಟೇಟಸ್, ವಾಟ್ಸಾಪ್ನಲ್ಲಿ ಸುಶಾಂತ್ ಫೋಟೋಗಳನ್ನು ಹಂಚಿಕೊಂಡು ಮೆಚ್ಚಿನ ನಟನ ಜನ್ಮದಿನವನ್ನು ಆಚರಿಸಿದರು.
ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಹುಟ್ಟೂರು ಬಿಹಾರದ ಹುಟ್ಟೂರಿನ ರಸ್ತೆಯೊಂದಕ್ಕೆ ಸುಶಾಂತ್ ಹೆಸರು ಇಡಲಾಗಿತ್ತು. ಇದೀಗ ನವದೆಹಲಿಯ ಆ್ಯಂಡ್ರೂಸ್ ಗಂಜ್ ಪ್ರದೇಶದ ರಸ್ತೆಗೆ ಸುಶಾಂತ್ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಈ ವಿಚಾರವನ್ನು ನಿನ್ನೆ ಸುಶಾಂತ್ ಹುಟ್ಟುಹಬ್ಬದಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್ ಅಭಿಷೇಕ್ ದತ್ ಘೋಷಿಸಿದ್ದಾರೆ. ಆರು ತಿಂಗಳ ಹಿಂದೆಯೇ ಸುಶಾಂತ್ ಸಿಂಗ್ ರಜಪೂತ್ ಹೆಸರನ್ನು ಆ್ಯಂಡ್ರೂಸ್ ಗಂಜ್ ಪ್ರದೇಶದ ರಸ್ತೆಗೆ ಮರುನಾಮಕರಣ ಮಾಡುವ ವಿನಂತಿಯನ್ನು ನಾನು ಸ್ವೀಕರಿಸಿದ್ದೇನೆ. ಈಗ ಈ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ. ಶೀಘ್ರವೇ ಈ ರಸ್ತೆಯನ್ನು ಉದ್ಘಾಟಿಸಲಿದ್ದೇವೆ" ಎಂದು ಅಭಿಷೇಕ್ ದತ್ ಹೇಳಿದ್ದಾರೆ.