ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದೆ. ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಕಚೇರಿಗೆ ಆಗಮಿಸಿದ್ದಾರೆ.
ಸುಶಾಂತ್ ಡೆತ್ ಕೇಸ್: ಡ್ರಗ್ಸ್ ಲಿಂಕ್ ಕುರಿತ ಎನ್‌ಸಿಬಿ ವಿಚಾರಣೆಗೆ 2ನೇ ಬಾರಿ ಹಾಜರಾದ ರಿಯಾ - ಎನ್‌ಸಿಬಿ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿಯನ್ನು 2ನೇ ಬಾರಿಗೆ ಎನ್‌ಸಿಬಿ ಕರೆಯಿಸಿಕೊಂಡಿದೆ.
ಭಾನುವಾರ ಕೂಡ ಎನ್‌ಸಿಬಿ ವಿಚಾರಣೆಗೆ ರಿಯಾ ಹಾಜರಾಗಿದ್ದು, ಇಂದು ಎರಡನೇ ಬಾರಿ ಹಾಜರಾದಂತಾಗಿದೆ. ಭಾನುವಾರ ಆರು ಗಂಟೆಗಳ ಕಾಲ ಎನ್‌ಸಿಬಿ ಅಧಿಕಾರಿಗಳು ರಿಯಾರನ್ನು ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎನ್‌ಸಿಬಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಮುತಾ ಅಶೋಕ್ ಜೈನ್, ರಿಯಾರನ್ನು ಸೋಮವಾರ ಕೂಡ ಮತ್ತೆ ಕರೆಯಿಸಿಕೊಂಡು ಅವರ ಹೇಳಿಕೆಗಳನ್ನ ರೆಕಾರ್ಡ್ ಮಾಡಲಾಗುವುದು ಎಂದು ತಿಳಿಸಿದ್ದರು.
ಡ್ರಗ್ಸ್ ಲಿಂಕ್ ಸಂಬಂಧ ಬಂಧಿಸಲ್ಪಟ್ಟಿದ್ದ ಕೈಜಾನ್ ಇಬ್ರಾಹಿಂ ತನಿಖೆ ವೇಳೆ ಅನುಜ್ ಕೇಶವಾನಿ ಎಂಬ ವ್ಯಕ್ತಿಯ ಹೆಸರನ್ನು ಹೇಳಿದ್ದ. ಅನುಜ್ ಕೇಶವಾನಿ ಮೇಲೆ ದಾಳಿ ನಡೆಸಿ, 590 ಗ್ರಾಂ ಹ್ಯಾಶಿಶ್, 0.64 ಗ್ರಾಂ LSD ಶೀಟ್ಗಳು, 304 ಗ್ರಾಂ ಗಾಂಜಾ, 1,85,200 ರೂ. ನಗದು ಮತ್ತು 5,000 ಇಂಡೋನೇಷ್ಯಾ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಮುತಾ ಅಶೋಕ್ ಜೈನ್ ಹೇಳಿದ್ದಾರೆ.