ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ಗೆ ನಟಿಯಾಗುವ ಕನಸು. ಅದಕ್ಕಾಗಿ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಚಲನಚಿತ್ರ ಅಧ್ಯಯನ ಕೋರ್ಸ್ ಅನ್ನು ಸಹ ಓದುತ್ತಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಎಸ್‌ಆರ್‌ಕೆ ಮಗಳು ಜೋಯಾ ಅಖ್ತರ್ ನಿರ್ದೇಶನದ ಸಿನಿಮಾವೊಂದರ ಮೂಲಕ ಶೀಘ್ರದಲ್ಲೇ ಲಾಂಚ್ ಆಗಲಿದ್ದಾರೆ. ಆರ್ಚಿ ಕಾಮಿಕ್ಸ್ ಆಧರಿಸಿ ತನ್ನ ಮುಂಬರುವ ತನ್ನ ಪ್ರಾಜೆಕ್ಟ್‌ನಲ್ಲಿ ಸುಹಾನಾರನ್ನು ಪ್ರಮುಖ ಪಾತ್ರದಲ್ಲಿ ತೋರಿಸಲು ನಿರ್ದೇಶಕಿ ಜೋಯಾ ಅಖ್ತರ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಜೋಯಾ ಇಂಟರ್‌ನ್ಯಾಷನಲ್ ಕಾಮಿಕ್ ಪುಸ್ತಕ ಆರ್ಚಿಯ ಭಾರತೀಯ ರೂಪಾಂತರದಲ್ಲಿ ಡಿಜಿಟಲ್ ಟಾಪರ್ ನೆಟ್‌ಫ್ಲಿಕ್ಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಇದು ಹದಿಹರೆಯದ ಕಥೆಯಾಗಿದ್ದು, ಅದಕ್ಕಾಗಿ ಅನೇಕ ಯುವ ಪ್ರತಿಭೆಗಳನ್ನು ನಿರ್ದೇಶಕಿ ಜೋಯಾ ಹುಡುಕುತ್ತಿದ್ದರು. ಶಾರುಖ್ ಖಾನ್ ಅವರ ಮಗಳು ಸುಹಾನಾ ಸದ್ಯ ಅವರ ಪ್ರಮುಖ ಪಾತ್ರವೊಂದರ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಜೋಯಾ ಅಧಿಕೃತವಾಗಿ ಶಾರುಖ್ ಖಾನ್ ಅವರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ, ಇದಾದ ನಂತರ ಚೊಚ್ಚಲ ಪ್ರಾಜೆಕ್ಟ್ಗೆ ಸುಹಾನಾ ಸಹಿ ಮಾಡಲಿದ್ದಾರೆ. ಜೋಯಾ ಆರ್ಚಿಯೊಂದಿಗೆ ಇನ್ನೂ ಇಬ್ಬರು ಸ್ಟಾರ್ ಮಕ್ಕಳನ್ನು ಪರಿಚಯಿಸಲು ಯೋಜಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್
ಈ ಚಿತ್ರದ ಮೂಲಕ ಸುಹಾನಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರೂ, ಇದು ಅವಳ ಮೊದಲ ನಟನೆಯ ಪ್ರಾಜೆಕ್ಟ್ ಅಲ್ಲ. ಯಾಕೆಂದರೆ, ಸುಹಾನಾ ಈಗಾಗಲೇ 'ದಿ ಗ್ರೇ ಪಾರ್ಟ್ ಆಫ್ ಬ್ಲೂ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. 2019ರಲ್ಲಿ ಯೂಟ್ಯೂಬ್‌ನಲ್ಲಿ ಈ ಕಿರುಚಿತ್ರವು 1.9 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ.