ಕರ್ನಾಟಕ

karnataka

By

Published : Jan 20, 2022, 2:23 PM IST

ETV Bharat / sitara

ಅಮಿತಾಬ್ ಪೋಸ್ಟ್‌ಗೆ ‘ಬಾಸ್ ಈಸ್ ಔಟ್’ ಎಂದು ಗಂಗೂಲಿ ಕಮೆಂಟ್​: ಇದಕ್ಕೆ ಬಚ್ಚನ್ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ನಟ ಅಮಿತಾಬ್ ಬಚ್ಚನ್ ಅವರು ಇತ್ತೀಚೆಗೆ ಮಾಡಿದ ಪೋಸ್ಟ್ ಒಂದಕ್ಕೆ ‘ಬಾಸ್ ಈಸ್ ಔಟ್. ವಯಸ್ಸು ಅನ್ನೋದು ಅವರಿಗೆ ಕೇವಲ ಒಂದು ಸಂಖ್ಯೆ’ ಎಂದು ಸೌರವ್ ಗಂಗೂಲಿ ಕಮೆಂಟ್​ ಮಾಡಿದ್ದಾರೆ.

ourav Ganguly comments on Amitabh Bachchan instagram post
ಅಮಿತಾಬ್ ಬಚ್ಚನ್ ಇನ್‌ಸ್ಟಾಗ್ರಾಮ್ ಪೋಸ್ಟ್

ಬಾಲಿವುಡ್​ನ ಹಿರಿಯ ನಟ ಅಮಿತಾಬ್ ಬಚ್ಚನ್ (79) ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇತ್ತೀಚೆಗೆ ಮಾಡಿದ ಪೋಸ್ಟ್ ಒಂದಕ್ಕೆ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕೂಡ ಕಮೆಂಟ್​ ಮಾಡಿದ್ದಾರೆ.

'ಸಿಟಿ ಫಾಗ್' ಎಂದು ಬರೆದಿರುವ​​ ಜಾಗಿಂಗ್​ ಸೂಟ್, ನೀಲಿ ಕ್ಯಾಪ್ ಧರಿಸಿ ಅಮಿತಾಬ್ ಬಚ್ಚನ್ ಮನೆಯಿಂದ ಹೊರಬರುತ್ತಿರುವ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದರು. ಇದಕ್ಕೆ ಸೌರವ್ ಗಂಗೂಲಿ ‘ಬಾಸ್ ಈಸ್ ಔಟ್. ವಯಸ್ಸು ಅನ್ನೋದು ಅವರಿಗೆ ಕೇವಲ ಒಂದು ಸಂಖ್ಯೆ’ ಎಂದು ಕಮೆಂಟ್​ ಮಾಡಿದ್ದಾರೆ.

ಅಮಿತಾಬ್ ಬಚ್ಚನ್ ಇನ್‌ಸ್ಟಾಗ್ರಾಮ್ ಪೋಸ್ಟ್

ಇದನ್ನೂ ಓದಿ:'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಚ್ಚನ್, "ನೀವು ಸರಿಯಾಗಿಯೇ ಹೇಳಿದ್ದೀರಿ. ನಗರದಲ್ಲಿ ಮಂಜು ಇಲ್ಲ. ಈ ಕೋವಿಡ್‌ನ ಶೂನ್ಯತೆಯಿಂದ ದೂರವಿರಲು ನಮ್ಮೆಲ್ಲರನ್ನು ಬೆಳಗಿಸಲು ಮುಂಬೈ ಪ್ರಕಾಶಮಾನವಾಗಿದೆ. ನನ್ನ ಮಾತಿನ ಅರ್ಥ ನಿಮಗೆ ತಿಳಿದಿದೆ" ಎಂದು ಬರೆದಿದ್ದಾರೆ.

ಬಾಲಿವುಡ್​ನ ಅನೇಕ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿರುವ ಅಮಿತಾಬ್ ಬಚ್ಚನ್ ತಮ್ಮ ಮುಂದಿನ 'ಬ್ರಹ್ಮಾಸ್ತ್ರ', 'ಉಂಚೈ', 'ರನ್ವೇ 34' ಮತ್ತು 'ಗುಡ್ ಬೈ' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

For All Latest Updates

ABOUT THE AUTHOR

...view details