ಕರ್ನಾಟಕ

karnataka

ETV Bharat / sitara

ನ.5 ರಂದು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಸಿನಿಮಾ ರಿಲೀಸ್​​.. - ಸೂಪರ್ ಸ್ಟಾರ್ ಅಕ್ಷಯ್ ಕುಮಾರ್

ವಿಡಿಯೋದಲ್ಲಿ ಮೂವರು ನಟರು ದೀಪಾವಳಿಯ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಹುನಿರೀಕ್ಷಿತ 'ಸೂರ್ಯವಂಶಿ' ಚಿತ್ರ ಬಿಡುಗಡೆಯಾಗುತ್ತಿದೆ. ಆದ್ದರಿಂದ ಸಿನಿಮಾ ಪ್ರೇಮಿಗಳು ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾವನ್ನು ಯಶಸ್ವಿಗೊಳಿಸಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ..

Sooryavanshi
ನವೆಂಬರ್ 5 ರಂದು 'ಸೂರ್ಯವಂಶಿ' ಸಿನಿಮಾ ರಿಲೀಸ್​​

By

Published : Oct 15, 2021, 3:49 PM IST

ಮುಂಬೈ :ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಸೂರ್ಯವಂಶಿ" ನವೆಂಬರ್ 5 ರಂದು ಬಿಡುಗಡೆಯಾಗಲಿದೆ.

ಅಕ್ಟೋಬರ್ 22ರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯುವುದಾಗಿ ಘೋಷಿಸಿದ ನಂತರ ನಿರ್ದೇಶಕ ರೋಹಿತ್ ಶೆಟ್ಟಿ ಕಳೆದ ತಿಂಗಳು ಸಾಮಾಜಿಕ ಮಾಧ್ಯಮದಲ್ಲಿ "ಸೂರ್ಯವಂಶಿ" ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಇಂದು ನಟ ಅಕ್ಷಯ್ ಕುಮಾರ್ ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ, ಒಂದು ಸಣ್ಣ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಜತೆ ಕಾಣಿಸಿಕೊಂಡಿದ್ದಾರೆ.

ವಿಡಿಯೋದಲ್ಲಿ ಮೂವರು ನಟರು ದೀಪಾವಳಿಯ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಹುನಿರೀಕ್ಷಿತ 'ಸೂರ್ಯವಂಶಿ' ಚಿತ್ರ ಬಿಡುಗಡೆಯಾಗುತ್ತಿದೆ. ಆದ್ದರಿಂದ ಸಿನಿಮಾ ಪ್ರೇಮಿಗಳು ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾವನ್ನು ಯಶಸ್ವಿಗೊಳಿಸಬೇಕು ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

"ಸೂರ್ಯವಂಶಿ" ಚಿತ್ರ ಮಾರ್ಚ್ 24, 2020ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕೋವಿಡ್​​ ಕಾರಣದಿಂದ ವಿಳಂಬವಾಗಿದೆ. ಚಿತ್ರವನ್ನು ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ನಟಿ ಕತ್ರಿನಾ ಕೈಫ್, ಅಕ್ಷಯ್ ಕುಮಾರ್​ಗೆ ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಿದ್ದಾರೆ.

ABOUT THE AUTHOR

...view details