ಕರ್ನಾಟಕ

karnataka

ETV Bharat / sitara

ಬಿಡುಗಡೆಯಾದ ಮೊದಲ ದಿನವೇ__ಕೋಟಿ ರೂ ಬಾಚಿಕೊಂಡ 'ಸೂರ್ಯವಂಶಿ' - ಚಿತ್ರಮಂದಿರಗಳ ಆಸನ ಭರ್ತಿ

ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿಕೊಡಲಾಗಿದ್ದು ಇದರ ಹೊರತಾಗಿಯೂ ಸೂರ್ಯವಂಶಿ ಚಿತ್ರಕ್ಕೆ ಪ್ರೇಕ್ಷಕರಿಂದ ಒತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Sooryavanshi box office: Akshay Kumar stararer receives roaring response on day one
ಸೂರ್ಯವಂಶಿ ಚಿತ್ರದ ಪೋಸ್ಟರ್​

By

Published : Nov 6, 2021, 7:11 PM IST

ಮುಂಬೈ (ಮಹಾರಾಷ್ಟ್ರ): ಅಕ್ಷಯ್ ಕುಮಾರ್, ಕತ್ರಿನಾ ಕೈಫ್​, ಅಜಯ್​ ದೇವಗನ್​ ಮತ್ತು ರಣವೀರ್​ ಸಿಂಗ್​ ಬಹುತಾರಾಗಣದ ಬಾಲಿವುಡ್​ನ 'ಸೂರ್ಯವಂಶಿ' ನಿನ್ನೆ ದೇಶಾದ್ಯಂತ (ಶುಕ್ರವಾರ-ನ.05) ಬಿಡುಗಡೆಯಾಗಿದ್ದು ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ.

ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 26.29 ಕೋಟಿ ರೂ.ಗಳನ್ನು ಗಳಿಸಿದ್ದು ಚಿತ್ರಕ್ಕೆ ಪ್ರೇಕ್ಷಕರಿಂದ ಒತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾದಿಂದ ಚಿತ್ರದ ಬಿಡುಗಡೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ವಿಳಂಬವಾದರೂ ಸೂರ್ಯವಂಶಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್​ ದೊರೆತಿದೆ. ನಿರೀಕ್ಷೆಗೆ ತಕ್ಕಂತೆಯೇ ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸೂರ್ಯವಂಶಿ ಚಿತ್ರದ ಪೋಸ್ಟರ್​

ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಎಂಟರ್‌ಟೈನ್‌ಮೆಂಟ್, ರೋಹಿತ್ ಶೆಟ್ಟಿ ಚಿತ್ರಕ್ಕೆ ನಿರ್ದೇಶನ ಹೇಳಿದ್ದು ದೇಶಾದ್ಯಂತ ಒಂದೇ ದಿನದಲ್ಲೇ 26 ಕೋಟಿ ರೂ ಗಳಿಸಿದೆ. ನಾಳೆಯ ದಿನದ ಟಿಕೆಟ್​ ಕೂಡ ಭರ್ತಿಯಾಗಿವೆ. ದೇಶದ ಹಲವು ರಾಜ್ಯಗಳಲ್ಲಿ ಆಸನ ಭರ್ತಿಗೆ ಅವಕಾಶ ನೀಡದಿದ್ದರೂ ಸಹ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಾಡುತ್ತಿದೆ ಎಂದು ಹೇಳಿದೆ.

ABOUT THE AUTHOR

...view details