ಕರ್ನಾಟಕ

karnataka

ETV Bharat / sitara

'ನನ್ನ ಗರ್ಲ್​ಫ್ರೆಂಡ್​ ಬಳಿ ಹೋಗಲು ನೆರವಾಗಿ' ಎಂದ ಅಭಿಮಾನಿಗೆ ಸೋನು ಸೂದ್ ಹೇಳಿದ್ದೇನು? - ಅಭಿಮಾನಿಗೆ ಸೋನು ಸೂದ್ ಹೇಳಿದ್ದೇನು

ಅಣ್ಣ ನನ್ನ ಗೆಳತಿಯ ಬಳಿಗೆ ಹೋಗಲು ನನಗೆ ಸಹಾಯ ಮಾಡಿ ಎಂದು ಅಭಿಮಾನಿಯೊಬ್ಬ ಮಾಡಿದ್ದ ಟ್ವೀಟ್​ಗೆ ನಟ ಸೋಲು ಸೂದ್ ಸಖತ್ ಆಗೆ ಉತ್ತರಿಸಿದ್ದಾರೆ.

Sonu Sood's hilarious reply
ಸೋನು ಸೂದ್ ಲೇಟೆಸ್ಟ್ ನ್ಯೂಸ್

By

Published : May 26, 2020, 6:26 PM IST

ಮುಂಬೈ: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ತಲುಪಿಸುವ ಮಹತ್ತರ ಕಾರ್ಯ ಮಾಡುತ್ತಿರುವ ನಟ ಸೋನು ಸೂದ್​ಗೆ ಅಭಿಮಾನಿಯೋಬ್ಬ ವಿಶೇಷ ಬೇಡಿಕೆ ಇಟ್ಟಿದ್ದಾನೆ.

ಈ ಬಗ್ಗೆ ಟ್ವೀಟ್​ ಮಾಡಿರುವ ವ್ಯಕ್ತಿಯೋರ್ವ, 'ಅಣ್ಣ ನನ್ನ ಗೆಳತಿಯ ಬಳಿಗೆ ಹೋಗಲು ನನಗೆ ಸಹಾಯ ಮಾಡಿ. ಅವಳು ಬಿಹಾರದಲ್ಲಿದ್ದಾಳೆ' ಎಂದಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, 'ಕೆಲವು ದಿನಗಳವರೆಗೆ ದೂರವಿರಲು ಪ್ರಯತ್ನಿಸಿ ಸಹೋದರ. ನಿಮ್ಮ ನಿಜವಾದ ಪ್ರೀತಿಗೆ ಇದೊಂದು ಪರೀಕ್ಷೆಯಾಗಿದೆ' ಎಂದಿದ್ದಾರೆ.

ವಿಲನ್‌ನೊಳಗೊಬ್ಬ ರಿಯಲ್‌ ಹೀರೋ: ಕನ್ನಡದ ಕಾರ್ಮಿಕರನ್ನು ಊರು ತಲುಪಿಸಿದ ಸೋನು ಸೂದ್

ಲಾಕ್​ಡೌನ್​ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ತಮ್ಮ ರಾಜ್ಯಗಳಿಗೆ ಮರಳಲು ಸೋನು ಸೂದ್ ಸಹಾಯ ಮಾಡುತ್ತಿದ್ದಾರೆ. ತೆರೆ ಮೇಲೆ ಕಳನಟನಾದರೂ ರಿಯಲ್ ಲೈಫ್​ನಲ್ಲಿ ಹಲವರ ಪಾಲಿಗೆ ಹೀರೋ ಆಗಿದ್ದು, ನಟ ಅಜಯ್ ದೇವಗನ್​ ಕೂಡ ಸೋನು ಸೂದ್​​ಗೆ ಮೆಚ್ಚುಗೆ ಸೂಚಿಸಿದ್ದರು.

ಮತ್ತೆ ವಲಸೆ ಕಾರ್ಮಿಕರ ರಕ್ಷಣೆಗೆ ನಿಂತ ನಟ ಸೋನು ಸೂದ್​

ಈ ಬಗ್ಗೆ ಮಾತನಾಡಿದ್ದ ಅವರು, ಇದೊಂದು ಭಾವನಾತ್ಮಕ ಪ್ರಯಾಣವಾಗಿದೆ. ವಲಸಿಗರು ತಮ್ಮ ಮನೆಗಳಿಂದ ದೂರವಿರುವುದು ಮತ್ತು ಮನೆಗೆ ತೆರಳಲು ಪ್ರಯತ್ನಿಸುತ್ತಿರುವುದನ್ನು ನೋಡಿ ನನ್ನ ಹೃದಯಕ್ಕೆ ನೋವಾಗಿದೆ. ನಾನು ವಲಸಿಗರನ್ನು ಮನೆಗೆ ಕಳುಹಿಸುವುದನ್ನು ಮುಂದುವರಿಸುತ್ತೇನೆ. ಕೊನೆಯ ವಲಸಿಗ ತನ್ನ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಸೇರುವವರೆಗೂ ನನ್ನ ಕಾರ್ಯ ಮುಂದುವರಿಯಲಿದೆ ಎಂದಿದ್ದಾರೆ.

ವೈದ್ಯಕೀಯ ಸಿಬ್ಬಂದಿಗೆ ಸ್ವಂತ ಹೋಟೆಲ್ ಬಿಟ್ಟುಕೊಡಲು ಮುಂದಾದ ನಟ ಸೋನು ಸೂದ್..

ABOUT THE AUTHOR

...view details