ಮುಂಬೈ:ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು, ಕೂಲಿ ಕೆಲಸಗಾರರು ಸೇರಿದಂತೆ ಅನೇಕ ಜನಪರ ಕೆಲಸ ಮಾಡಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿರುವ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ವದ ಕೆಲಸ ಕೈಗೊಂಡಿದ್ದಾರೆ.
20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ವ್ಯವಸ್ಥೆ: ನಟ ಸೋನು ಸೂದ್ - 20 ಸಾವಿರ ವಲಸೆ ಕಾರ್ಮಿಕರು
ಲಾಕ್ಡೌನ್ ಸಮಯದಲ್ಲಿ ಸಮಾಜಮುಖಿ ಕೆಲಸಗಳಿಂದ ದೇಶದ ಜನರ ಹೃದಯ ಗೆದ್ದ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ.
ಉತ್ತರಪ್ರದೇಶ-ದೆಹಲಿಯ ಮಧ್ಯದಲ್ಲಿರುವ ನೋಯ್ಡಾದ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ 20 ಸಾವಿರ ವಲಸೆ ಕಾರ್ಮಿಕರಿಗೆ ಇದೀಗ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಈಗಾಗಲೇ ಜಾಬ್ ಪೂರ್ಟಲ್ ಪ್ರವಾಸಿ ರೋಜ್ ಗಾರ್ ಮೂಲಕ ವಲಸೆ ಕಾರ್ಮಿಕರಿಗೆ ಸಹಾಯ ಮಾಡುತ್ತಿರುವ ಸೋನು ಸೂದ್, ಇದೀಗ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವೀಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
47 ವರ್ಷದ ಸೋನು ಸೂದ್ ತಮ್ಮ ಪ್ರವಾಸಿ ರೋಜ್ಗಾರ್ ಮೂಲಕವೇ ಅನೇಕ ವಲಸೆ ಕಾರ್ಮಿಕರಿಗೆ ಕೆಲಸ ಕೊಡಿಸಿದ್ದಾರೆ. ಎನ್ಎಇಸಿ ಅಧ್ಯಕ್ಷ ಲಲಿತ್ ತುಕ್ರಾಲ್ ಅವರ ಬೆಂಬಲದೊಂದಿಗೆ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಕಾರ್ಮಿಕರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.