ಬಹುಭಾಷಾ ನಟ ಸೋನು ಸೂದ್ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುವ ಮೂಲಕ ಜನರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾವಿರಾರು ಜನರ ಸಂಕಷ್ಟಕ್ಕೆ ನೆರವಾಗಿರುವ ಅವರಿಗೆ ಅಭಿಮಾನಿ ಬಳಗ ಏನು ಕಮ್ಮಿಯಿಲ್ಲ.
ನಟ ಸೋನು ಸೂದ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿ ಬಳಗ: Video - ಕೋವಿಡ್
ಮುಂಬೈ ಏರ್ಪೋರ್ಟ್ನಲ್ಲಿ ನಟ ಸೋನು ಸೂದ್ ಕಣ್ತುಂಬಿಕೊಳ್ಳಲು ಜನಸಾಗರವೇ ನೆರೆದಿದ್ದು, ನೆಚ್ಚಿನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

Sonu Sood
ನಟ ಸೋನು ಸೂದ್ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅಭಿಮಾನಿ ಬಳಗ
ಮುಂಬೈನ ಏರ್ಪೋರ್ಟ್ಗೆ ನಟ ಸೋನು ಸೂದ್ ಬಂದಿಳಿದಿದ್ದು, ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಷ್ಟೇ ಅಲ್ಲದೇ, ಅವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಸರಿಯಲ್ಲ, ನನಗೆ ನಿಮ್ಮ ಪ್ರೀತಿ ಮಾತ್ರ ಸಾಕು: ಸುದೀಪ್