ಕರ್ನಾಟಕ

karnataka

ETV Bharat / sitara

ಹೃದಯವಂತನಿಗೆ 47ನೇ ಜನ್ಮದಿನದ ಸಂಭ್ರಮ...ರಿಯಲ್ ಹೀರೋಗೆ ಹಾರೈಸಿದ ದೇಶದ ಜನತೆ - ಅರುಂಧತಿ ಪಶುಪತಿ ಖ್ಯಾತಿಯ ಸೋನುಸೂದ್

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಕೋಟ್ಯಂತರ ಜನರ ಪ್ರೀತಿ ಗಳಿಸಿದ ನಟ ಸೋನು ಸೂದ್ ಜನ್ಮದಿನ ಇಂದು. 47ನೇ ವಸಂತಕ್ಕೆ ಕಾಲಿಟ್ಟಿರುವ ಸೋನು ಸೂದ್​ ಹುಟ್ಟುಹಬ್ಬಕ್ಕೆ ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

Sonu SoodSonu Sood celebration his 47th birthday
47ನೇ ಜನ್ಮದಿನದ ಸಂಭ್ರಮದಲ್ಲಿ ಸೋನು ಸೂದ್​

By

Published : Jul 30, 2020, 10:55 AM IST

Updated : Jul 30, 2020, 11:03 AM IST

ಸೋನು ಸೂದ್, ಸಿನಿಮಾಗಳಲ್ಲಿ ವಿಲನ್ ಆದರೂ ನಿಜ ಜೀವನದಲ್ಲಿ ಮಾತ್ರ ಸೂಪರ್​ ಹೀರೋ ಎಂಬುದನ್ನು ಈ ಲಾಕ್​ ಡೌನ್​ ದಿನಗಳಲ್ಲಿ ಸಾಬೀತು ಮಾಡಿದ್ದಾರೆ. ಈ ಹೃದಯವಂತನಿಗೆ ಇಂದು 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

47ನೇ ಜನ್ಮದಿನದ ಸಂಭ್ರಮದಲ್ಲಿ ಸೋನು ಸೂದ್​

1999 ರಲ್ಲಿ 'ಕಳಲಗರ್' ತಮಿಳು ಚಿತ್ರದಲ್ಲಿ ಅರ್ಚಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನು ಸೂದ್, ನಂತರ ಹ್ಯಾಂಡ್ಸ್​ ಅಪ್, ಮಜ್ನು, ಅಮ್ಮಾಯಿಲು ಅಬ್ಬಾಯಿಲು, ಯುವ, ಚಂದ್ರಮುಖಿ, ಸೂಪರ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. 2006 ರಲ್ಲಿ 'ಜೋಧಾ ಅಕ್ಬರ್' ಚಿತ್ರದ ನಟನೆಗಾಗಿ ಸೋನು ಸೂದ್​ಗೆ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು. ಆದರೆ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟದ್ದು ಮಾತ್ರ ತೆಲುಗಿನ 'ಅರುಂಧತಿ' ಚಿತ್ರದ ಪಶುಪತಿ ಪಾತ್ರ. 2008ರಲ್ಲಿ ಬಿಡುಗಡೆಯಾದ ಈ ಚಿತ್ರದ ಅಭಿನಯಕ್ಕಾಗಿ ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಅವಾರ್ಡ್ ಹಾಗೂ ಉತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು.

47ನೇ ಜನ್ಮದಿನದ ಸಂಭ್ರಮದಲ್ಲಿ ಸೋನು ಸೂದ್​

'ಅರುಂಧತಿ' ಚಿತ್ರದ ನಂತರ ಸೋನು ಸೂದ್ ಸ್ಟಾರ್​​ ವ್ಯಾಲ್ಯೂ ಮತ್ತಷ್ಟು ಹೆಚ್ಚಾಯ್ತು. ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದ ಸೋನು ಸೂದ್ 2011 ರಲ್ಲಿ ಬಿಡುಗಡೆಯಾದ ​​'ವಿಷ್ಣುವರ್ಧನ' ಚಿತ್ರದ ಮೂಲಕ ಕನ್ನಡಕ್ಕೂ ಬಂದರು. ಕಳೆದ ವರ್ಷ ಬಿಡುಗಡೆಯಾದ 'ಕುರುಕ್ಷೇತ್ರ' ಚಿತ್ರದಲ್ಲಿ ಅರ್ಜುನನ ಪಾತ್ರದಲ್ಲಿ ಸೋನು ಸೂದ್ ನಟಿಸಿದ್ದಾರೆ.

ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿ ಹಣ, ಕೀರ್ತಿ ಗಳಿಸಿದ ಸೋನು ಸೂದ್ ರಿಯಲ್ ಲೈಫ್ ಹೀರೋ ಎಂದು ತಿಳಿದದ್ದು ಕೊರೊನಾ ಲಾಕ್​ ಡೌನ್ ಸಮಯದಲ್ಲಿ. ಆರಂಭದಲ್ಲಿ ತಮ್ಮ ಒಡೆತನದ ಸ್ಟಾರ್ ಹೊಟೆಲನ್ನು ಕೊರೊನಾ ವಾರಿಯರ್ಸ್​ಗೆ ಬಿಟ್ಟುಕೊಟ್ಟ ನಟ, ನಂತರ ಮುಂಬೈನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಸುಮಾರು 8 ಬಸ್​​ಗಳಲ್ಲಿ ಅವರವರ ಊರುಗಳಿಗೆ ತೆರಳುವ ವ್ಯವಸ್ಥೆ ಮಾಡಿದರು.

ಅವರ ಕೆಲಸ ಇಷ್ಟಕ್ಕೆ ನಿಲ್ಲಲಿಲ್ಲ. ತಾವೇ ರಸ್ತೆಗೆ ಇಳಿದು ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು. ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಹಾಗೂ ಇನ್ನಿತರ ಅಗತ್ಯವಿರುವ ವಸ್ತುಗಳನ್ನು ಪೂರೈಸಿದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಸುಗಳನ್ನು ಮಾರುತ್ತಿದ್ದವರಿಗೆ ಹಣದ ಸಹಾಯ ಮಾಡಿದರು. ರೈತ ಮಹಿಳೆಯರಿಗೆ ಟ್ಯ್ರಾಕ್ಟರ್ ಕೊಡಿಸಿದರು. ಹೊಟ್ಟೆಪಾಡಿಗಾಗಿ ರಸ್ತೆಯಲ್ಲಿ ದೊಣ್ಣೆ ವರಸೆ ಮಾಡುತ್ತಿದ್ದ ವೃದ್ಧೆಯನ್ನು ಸಂಪರ್ಕಿಸಿ ಅವರಿಗೂ ಸಹಾಯ ಮಾಡಿದರು.

47ನೇ ಜನ್ಮದಿನದ ಸಂಭ್ರಮದಲ್ಲಿ ಸೋನು ಸೂದ್​

ಸೋನು ಸೂದ್ ಮಾಡಿರುವ ಉಪಕಾರ ಒಂದಲ್ಲಾ ಎರಡಲ್ಲ. ಇಂದು ಕೋಟ್ಯಂತರ ಜನರು ಆತನನ್ನು ನೆನೆಸಿಕೊಳ್ಳವ ಕೆಲಸ ಮಾಡಿದ್ದಾರೆ ಈ ನಟ. ಆಂಧ್ರಪ್ರದೇಶದ ಯುವಕರು ಸೋನು ಸೂದ್ ಫೋಟೋಗೆ ಹಾಲಿನ ಅಭಿಷೇಕ ಮಾಡುತ್ತಿದ್ದ ವಿಡಿಯೋ ವೈರಲ್ ಆಗುತ್ತಿದೆ. ಸೋನು ಅವರಿಂದ ಸಹಾಯ ಪಡೆದವರು ಅವರು ನೂರು ಕಾಲ ಬಾಳಲಿ ಎಂದು ಹಾರೈಸುತ್ತಿದ್ದಾರೆ.

47ನೇ ಜನ್ಮದಿನದ ಸಂಭ್ರಮದಲ್ಲಿ ಸೋನು ಸೂದ್​

ಸೂನು ಸೂದ್ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ 1996 ರಲ್ಲಿ ಸೊನಾಲಿ ಎಂಬುವವರನ್ನು ಸೋನು ವಿವಾಹವಾದರು. ಈ ದಂಪತಿಗೆ ಇಶಾಂತ್ ಹಾಗೂ ಅಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಸದ್ಯಕ್ಕೆ ಸೋನು ಸೂದ್ 'ಪೃಥ್ವಿರಾಜ್', 'ತಮಿಳರಸನ್' ಸೇರಿ 5-6 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಟಿವಿ ಭಾರತದ ವತಿಯಿಂದ ಸೋನು ಸೂದ್​​​ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Last Updated : Jul 30, 2020, 11:03 AM IST

ABOUT THE AUTHOR

...view details