ಹೈದರಾಬಾದ್ (ತೆಲಂಗಾಣ):ಬಾಲಿವುಡ್ ನಟಿ ಸೋನಂ ಕಪೂರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ತಾನು ತಾಯಿಯಾಗಲಿರುವ ಕುರಿತು ಬರೆದುಕೊಂಡಿದ್ದಾರೆ.
ನಟಿ ಸೋನಂ ಕಪೂರ್ ತಮ್ಮ ಪತಿ ಉದ್ಯಮಿಯಾದ ಆನಂದ್ ಅಹುಜಾ ಅವರ ಮಡಿಲಲ್ಲಿ ಮಲಗಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ನಾಲ್ಕು ಕೈಗಳು, ಎರಡು ಹೃದಯ, ಒಂದು ಕುಟುಂಬ.
ನಾವು ನಿನ್ನನ್ನು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು ಇಷ್ಟಪಡುತ್ತೇವೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ನಾವಿರುತ್ತೇವೆ. ಪ್ರೀತಿ ಮತ್ತು ಬೆಂಬಲ ಸದಾ ನಿನ್ನೊಂದಿಗಿರುತ್ತದೆ. ನಿನ್ನ ಆಗಮನಕ್ಕೆ ಕಾಯುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ.