ಕರ್ನಾಟಕ

karnataka

ETV Bharat / sitara

ಭಾರತೀಯ ಕ್ರಿಕೆಟ್ ತಂಡಕ್ಕೆ ಈಕೆ ಅದೃಷ್ಟ ದೇವತೆಯಂತೆ...ಜೋಯಾ ಫ್ಯಾಕ್ಟರ್ ಟ್ರೇಲರ್​​​​​​​​​ ಬಿಡುಗಡೆ - ಫಾಕ್ಸ್ ಸ್ಟಾರ್ ಸ್ಟುಡಿಯೋಸ್

ಅಭಿಷೇಕ್ ಶರ್ಮಾ ನಿರ್ದೇಶನದ 'ಜೋಯಾ ಫ್ಯಾಕ್ಟರ್' ಟ್ರೇಲರ್ ಬಿಡುಗಡೆಯಾಗಿದೆ. ಸೋನಂ ಕಪೂರ್ ಹಾಗೂ ದುಲ್ಕರ್ ಸಲ್ಮಾನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಪ್ಟೆಂಬರ್ 20 ರಂದು ತೆರೆ ಕಾಣುತ್ತಿದೆ.

ಜೋಯಾ ಫ್ಯಾಕ್ಟರ್​​

By

Published : Aug 30, 2019, 5:32 PM IST

ಸೋನಂ ಕಪೂರ್ ಹಾಗೂ ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಜೋಯಾ ಫ್ಯಾಕ್ಟರ್'​​ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಅನುಜಾ ಚೌಹಾನ್​ ಬರೆದ 'ಜೋಯಾ ಫ್ಯಾಕ್ಟರ್' ಎಂಬ ಪುಸ್ತಕದಿಂದ ಚಿತ್ರಕಥೆಯನ್ನು ರಚಿಸಿ ಅದೇ ಹೆಸರಿನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

'ಜೋಯಾ ಫ್ಯಾಕ್ಟರ್'

1983 ಜೂನ್ 25 ಜೋಯಾ ಎಂಬ ಮಗು ಹುಟ್ಟಿದ ದಿನ ಭಾರತೀಯ ಕ್ರಿಕೆಟ್ ತಂಡಕ್ಕೆ ಅದೃಷ್ಟ ಖುಲಾಯಿಸಿ ವಿಶ್ವಕಪ್ ಗೆದ್ದುಕೊಂಡಿತು ಎಂಬ ನಿರೂಪಣೆಯಿಂದ ಚಿತ್ರದ ಟ್ರೇಲರ್ ಆರಂಭವಾಗುತ್ತದೆ. ಜೋಯಾ ಬೆಳೆದು ದೊಡ್ಡವಳಾದಾಗ ಒಂದು ಆ್ಯಡ್ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರುತ್ತಾಳೆ. ಆದರೆ ಜೋಯಾ ಮಾತ್ರ ತನಗೆ ಲವ್ ಹಾಗೂ ಪ್ರೊಫೆಷನ್ ಲೈಫ್​​​ನಲ್ಲಿ ಅದೃಷ್ಟ ಇಲ್ಲ ಎಂದುಕೊಳ್ಳುತ್ತಾಳೆ. ತಾನು ಹುಟ್ಟಿದ ದಿನ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಿದ್ದು ತನ್ನ ತಂದೆ ನಾನು ಕ್ರಿಕೆಟ್ ತಂಡಕ್ಕೆ ಅದೃಷ್ಟದೇವತೆ ಎಂದು ಯಾವಾಗಲೂ ಹೇಳುವುದಾಗಿ ಜೋಯಾ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಾಳೆ. ಆಕಸ್ಮಿಕ ಎಂಬಂತೆ ಜೋಯಾ ತನ್ನ ಆ್ಯಡ್ ಕಂಪನಿ ಮೂಲಕ ಕ್ರಿಕೆಟ್ ತಂಡವನ್ನು ಭೇಟಿ ಮಾಡುತ್ತಾಳೆ. ಜೋಯಾ ಹಾಗೂ ಕ್ರಿಕೆಟ್ ಕ್ಯಾಪ್ಟನ್​ ನಿಖಿಲ್​​​​​​​​​​​​​​​​​​​​ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ಜೋಯಾ ನಿಖಿಲ್​​​​ ಜೊತೆ ಇರುವುದರಿಂದಲೇ ಕಷ್ಟವಾದ ಮ್ಯಾಚ್​​​ಗಳನ್ನು ಕೂಡಾ ಸುಲಭವಾಗಿ ಗೆಲ್ಲುತ್ತಾರೆ ಎಂಬ ವಿಷಯ ಎಲ್ಲೆಡೆ ಹರಡುತ್ತದೆ. ಹೀಗೆ ಚಿತ್ರದ ಟ್ರೇಲರ್ ಸಾಗುತ್ತದೆ.

ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಬ್ಯಾನರ್ ಅಡಿ ಸಿನಿಮಾವನ್ನು ಪೂಜಾ ಶೆಟ್ಟಿ ಹಾಗೂ ಆರತಿ ಶೆಟ್ಟಿ ನಿರ್ಮಿಸಿದ್ದಾರೆ. ಅಭಿಷೇಕ್ ಶರ್ಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ದುಲ್ಕರ್ ಸಲ್ಮಾನ್ ಇಂಡಿಯನ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ಕಪೂರ್ ಸೋನಂ ಕಪೂರ್ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 20 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ABOUT THE AUTHOR

...view details