ಮುಂಬೈ:ದಬಾಂಗ್ ಬೆಡಗಿ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಮದುವೆ ಬಗ್ಗೆ ಕೆಲವೊಂದು ವಿಷಯಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ನೆಚ್ಚಿನ ನಟಿಯ ಬೊಲ್ಡ್ ಉತ್ತರಕ್ಕೆ ಪ್ಯಾನ್ಸ್ ಪುಲ್ ಫಿದಾ ಆಗಿದ್ದಾರೆ.
ತಮ್ಮ ಇನ್ಸ್ಟಾಗ್ರಾಂನಲ್ಲಿ 'ಆಸ್ಕ್ ಸೋನಾಕ್ಷಿ' ಅಂತ ಶಿರ್ಷಿಕೆ ಬರೆದು ಅಭಿಮಾನಿಗಳ ಜೊತೆ ಚಾಟಿಂಗ್ ನಟಿಸಿದ ಟಾಲಿವುಡ್ ಬ್ಯುಟಿಗೆ ಮದುವೆ ಯಾವಾಗ..? ಅನ್ನೊ ವೈಯಕ್ತಿಕ ಜೀವನದ ಪ್ರಶ್ನೆಗಳೆ ಹೆಚ್ಚಾಗಿದ್ದವು. ಅದಕ್ಕೆ ಅಷ್ಟೆ ಕೂಲಾಗಿ ಉತ್ತರಿಸಿದ್ದಾರೆ ಸೋನಾಕ್ಷಿ.
'ನೀವು ಯಾವಾಗ ಮದುವೆ ಆಗುತ್ತೀರಿ', ಗಂಡನ ಹೆಸರನ್ನು ಮದುವೆ ಆಗುತ್ತೀರಾ' (ಅಂದರೆ, ಮದುವೆ ಬಳಿಕ ಗಂಡನ ಹೆಸರನ್ನು ಇಟ್ಟುಕೊಳ್ಳುತ್ತೀರಾ?) ಎಂದು ಕೆಲ ಅಭಿಮಾನಿಗಳು ವಿಚಿತ್ರವಾಗಿ ಪ್ರಶ್ನೆ ಕೇಳಿದ್ರೆ. ಸೋನಾಕ್ಷಿ ಅಷ್ಟೆ ಕೂಲಾಗಿ ಉತ್ತರ ನೀಡಿದ್ದಾರೆ.
'ಯಾರೂ ಹೆಸರನ್ನು ಮದುವೆ ಆಗಲ್ಲ. ಮದುವೆ ಆಗುವುದು ಗಂಡನನ್ನು' ಅಂತ ಉತ್ತರಿಸಿ, ಎಲ್ಲಿ ಸಿಗ್ತಾನೆ? ಎಲ್ಲಿಂದ ತರಲ್ಲಿ ಅವನನ್ನ? ಯಾರಾದರೂ ಹೇಳಿ ಅಂತ ಪ್ರಶ್ನೆ ಮಾಡಿದ್ರು. ಇಷ್ಟೊಂದು ಚಿಂತೆ ನನ್ನ ಅಪ್ಪ- ಅಮ್ಮನೂ ಮಾಡುವುದಿಲ್ಲ ಅಂತ ಅಭಿಮಾನಿಗಳಿಗೆ ಪ್ರತ್ಯುತ್ತರ ನೀಡಿದ್ರು.