ಮುಂಬೈ: ಹಿಂದಿ ಕಿರುತೆರೆ ನಟ, ಬಿಗ್ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ(40) ಸಾವಿನ ನಂತರ ಅವರ ಕುಟುಂಬ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಕುಟುಂಬ, ಸಿದ್ದಾರ್ಥ್ ಶುಕ್ಲಾ ಬದುಕಿನ ಭಾಗವಾಗಿರುವ, ಅವರ ಮೇಲೆ ಪ್ರೀತಿಯ ಧಾರೆಯೆರೆದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಸಿದ್ದಾರ್ಥ್ ಈಗ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ಸದಾ ಗೌಪ್ಯತೆ ಗೌರವಿಸುತ್ತಿದ್ದರು. ಈಗ ನಾವು ದುಃಖದಲ್ಲಿದ್ದೇವೆ. ನಮ್ಮ ಗೌಪ್ಯತೆಯನ್ನು ದಯವಿಟ್ಟು ಗೌರವಿಸಿ ಎಂದು ಮನವಿ ಮಾಡಿದೆ.