ಸೌತ್ ಸಿನಿಮಾರಂಗದ, 'ರಂಗ್ ದೇ ಬಸಂತಿ' ಖ್ಯಾತಿಯ ನಟ ಸಿದ್ಧಾರ್ಥ್ ಅವರನ್ನು 'ಸೌತ್ ಕಾ ಸ್ವರಾ' ಎಂದು ನೆಟಿಜನ್‌ಗಳು ಕರೆಯುತ್ತಿದ್ದಾರೆ. ಈ ಬಗ್ಗೆ ಸಿದ್ದಾರ್ಥ್ ಟ್ವಿಟರ್ನಲ್ಲಿ ವಿಷಯ ಹಂಚಿಕೊಂಡು ನಟಿ ಸ್ವರಾ ಭಾಸ್ಕರ್ ಅವರನ್ನು ಟ್ಯಾಗ್ ಮಾಡಿದ್ದು,ಅವರಿಂದ ಆತ್ಮೀಯ ಪ್ರತಿಕ್ರಿಯೆ ಸಿಕ್ಕಿದೆ.
ಒಬ್ಬ ನಟಿ ಮಾತ್ರವಲ್ಲದೆ, ಸ್ವರಾ ಭಾಸ್ಕರ್ ಅವರು ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಧ್ವನಿ ಎತ್ತುವ ಮತ್ತು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿ ಸಹ ಹೌದು.
ನಟ ಸಿದ್ಧಾರ್ಥ್ ಸಹ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಒಬ್ಬ ಪ್ರಸಿದ್ಧ ವ್ಯಕ್ತಿ ಎಂಬ ಹೆಸರನ್ನು ಗಳಿಸಿದ್ದಾರೆ.
ಅದೇ ಕಾರಣಕ್ಕಾಗಿ, ನೆಟಿಜನ್‌ಗಳು ಅವರಿಗೆ 'ಸೌತ್ ಕಾ ಸ್ವರಾ' ಅಂತ ಟ್ಯಾಗ್ ನೀಡಿದ್ದಾರೆ ಮತ್ತು ಅವರು ಹೊಸ ಗುರುತಿನ ಬಗ್ಗೆ ಸಿದ್ದಾರ್ಥ್ ಸಂತೋಷಪಟ್ಟಿದ್ದಾರೆ.
ಅದ್ಭುತ ಮತ್ತು ಕ್ಯೂಟ್" ಎಂದು ಬರೆದಿದ್ದಾರೆ. ಈ ಟ್ವೀಟ್ಗೆ ಸ್ವರಾ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮತ್ತು "ನೀವು ಭಾರತ್ ಕಾ ಸಿದ್ಧಾರ್ಥ್ ಮತ್ತು ನಿಮಗೆ ತುಂಬಾ ಧನ್ಯವಾದಗಳು! ಅಲ್ಲದೆ, ಹೇ ಹಾಟ್ಟಿ" ಎಂದು ಬರೆದಿದ್ದಾರೆ.
ಸದ್ಯ ಈ ಇಬ್ಬರ ಟ್ವೀಟ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿದ್ದು, ಸಿದ್ಧಾರ್ಥ್ ಇವುಗಳ ಸ್ಕ್ರೀನ್ಶಾಟ್ಸ್ಗಳನ್ನು ಇನ್ಸ್ಟಾದಲ್ಲ ಶೇರ್ ಮಾಡಿಕೊಂಡಿದ್ದು, #ಟ್ರೆಂಡಿಂಗ್ಬಟ್ವೈ ಎಂದು ಬರೆದುಕೊಂಡಿದ್ದಾರೆ.
ಸ್ವರಾ ಸದ್ಯ ತನ್ನ ಮುಂದಿನ ಚಿತ್ರ ಜಹಾನ್ ಚಾರ್ ಯಾರ್ ಚಿತ್ರದ ಚಿತ್ರೀಕರಣದಲ್ಲಿದ್ದು, ಇದರಲ್ಲಿ ಮೆಹರ್ ವಿಜ್ ಮತ್ತು ಪೂಜಾ ಚೋಪ್ರಾ ಕೂಡ ನಟಿಸಿದ್ದಾರೆ. ಕಮಲ್ ಪಾಂಡೆ ನಿರ್ದೇಶನದ ಈ ಚಿತ್ರದ ಮೊದಲ ಶೂಟಿಂಗ್ ಲಖನೌದಲ್ಲಿ ನಡೆಯಿತು.