ಮುಂಬೈ:ನಮ್ಮ ಹೊಸ ಕಾಲದ ಸಿನಿಮಾ ಕಥೆಗಳಲ್ಲಿ ಮಹಿಳೆಯರು ಅವಿಭಾಜ್ಯ ಅಂಗವಾಗಿದ್ದು, ಹಿಂದಿ ಚಿತ್ರರಂಗದ ವಿಕಾಸಕ್ಕೆ ಮಹಿಳೆಯರೇ ಕಾರಣ ಎಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮಹಿಳೆಯರನ್ನು ಹಾಡಿ ಹೊಗಳಿದ್ದಾರೆ.
ನಾವು ಪರದೆ ಮೇಲೆ ಕಥೆಗಳನ್ನು ಹೇಳುವ ರೀತಿಯಲ್ಲಿ ನಾವು ಸಂಪೂರ್ಣ ವಿಕಸನವನ್ನು ನೋಡುತ್ತಿದ್ದೇವೆ. ಮಹಿಳೆಯರು ಈ ಪ್ರಕ್ರಿಯೆಯಲ್ಲಿ ನಿರಂತರ ಭಾಗಿಯಾಗಿದ್ದಾರೆ. ನಾನು ನಮ್ಮ ಹಿಂದಿ ಚಿತ್ರರಂಗದ ಸಿನಿಮಾವನ್ನು ಮೆಚ್ಚಿಕೊಂಡು ಬೆಳೆದಿದ್ದೇನೆ. ಅದರಲ್ಲೂ ಮುಖ್ಯವಾಗಿ ಮಹಿಳೆಯರು ಚಿತ್ರರಂಗದ ಬೆಳವಣಿಗೆ ಪಥವನ್ನು ಹೇಗೆ ರೂಪಿಸಿದ್ದಾರೆ ಎಂಬುದನ್ನು ವೈಯಕ್ತಿಕವಾಗಿ ಗಮನಿಸಿದ್ದೇನೆ. ಅವರು ಕೇವಲ ಸಿನಿಮಾ ಮಾತ್ರವಲ್ಲದೇ ರಾಷ್ಟ್ರದ ಒಟ್ಟಾರೆ ಬೆಳವಣಿಗೆಯ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಕೊಂಡಾಡಿದ್ದಾರೆ.