ಕರ್ನಾಟಕ

karnataka

ETV Bharat / sitara

ನಾನು ಯುದ್ಧಕ್ಕೆ ಹೋಗುತ್ತಿದ್ದೇನೆ ಎನ್ನಿಸುತ್ತಿದೆ...ಅದಾ ಶರ್ಮಾ - Ada sharma in shooting set

ಬಹಳ ದಿನಗಳ ನಂತರ ಶೂಟಿಂಗ್​​​​ಗೆ ಹಾಜರಾಗಿರುವ ರಣವಿಕ್ರಮ ಬೆಡಗಿ ಅದಾ ಶರ್ಮಾ, ನಾನು ಯುದ್ಧಕ್ಕೆ ಹೋಗುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಕಾಫಿ ಕಂಪನಿ ಜಾಹೀರಾತಿನಲ್ಲಿ ಅದಾ ಪಾಲ್ಗೊಂಡಿದ್ದಾರೆ.

adhah sharma on shooting amid corona
ಅದಾ ಶರ್ಮಾ

By

Published : Jun 25, 2020, 2:35 PM IST

ಲಾಕ್​ಡೌನ್​ ದಿನಗಳಲ್ಲಿ ಮನೆ ಕೆಲಸಗಳನ್ನು ಮಾಡಿಕೊಂಡು ಆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುತ್ತಿದ್ದ ಬಾಲಿವುಡ್ ನಟಿ ಅದಾಶರ್ಮಾ ಇದೀಗ ಬಹಳ ದಿನಗಳ ಬಳಿಕ ಮತ್ತೆ ಶೂಟಿಂಗ್​​​ಗೆ ಹಾಜರಾಗಿದ್ದಾರೆ.

ಆದರೆ ಅದಾ ಪಾಲ್ಗೊಂಡಿರುವುದು ಕಾಫಿ ಕಂಪನಿಯೊಂದರ ಜಾಹೀರಾತಿನ ಶೂಟಿಂಗ್​​ಗಾಗಿ. ಶೂಟಿಂಗ್ ಸೆಟ್​​ನಲ್ಲಿ ಫೇಸ್​ ಶೀಲ್ಡ್ ಹಾಕಿಕೊಂಡು ಸ್ನೇಹಿತರೊಂದಿಗೆ ತೆಗೆಸಿಕೊಂಡಿರುವ ಪೋಟೋವೊಂದನ್ನು ತಮ್ಮ ಟ್ವಿಟ್ಟರ್​​ನಲ್ಲಿ ಷೇರ್ ಮಾಡಿಕೊಂಡಿರುವ ಅದಾ ಶರ್ಮಾ, ಬಹಳ ದಿನಗಳ ನಂತರ ಶೂಟಿಂಗ್​​​​​ ಹಾಜರಾಗುತ್ತಿದ್ದೇನೆ. ಇದೊಂದು ಜಾಹೀರಾತಿನ ಚಿತ್ರೀಕರಣ. ಈ ತಂಡದಲ್ಲಿ 20 ಮಂದಿಗಿಂತ ಕಡಿಮೆ ಜನರಿದ್ದಾರೆ. ಎಲ್ಲರೂ ಸ್ಯಾನಿಟೈಸರ್, ಫೇಸ್ ಮಾಸ್ಕ್​​​​​​​ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಶೂಟಿಂಗ್​​ನಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾನು ಯಾವುದೋ ಯುದ್ಧದಲ್ಲಿ ಪಾಲ್ಗೊಳ್ಳುತ್ತಿರುವಂತೆ ನನಗೆ ಫೀಲ್ ಆಗುತ್ತಿದೆ ಎಂದು ಅದಾ ಶರ್ಮಾ ಹೇಳಿಕೊಂಡಿದ್ದಾರೆ.

ಇನ್ನು ತಮ್ಮ ಲಾಕ್​ಡೌನ್​ ದಿನಗಳ ಬಗ್ಗೆ ಕೂಡಾ ನೆನಪಿಸಿಕೊಂಡಿರುವ ಅದಾಶರ್ಮಾ, ಲಾಕ್​ಡೌನ್​ ದಿನಗಳಲ್ಲಿ ನಾನು ಕಲ್ಲಂಗಡಿ ಹಣ್ಣು ಕತ್ತರಿಸುವುದನ್ನು ಕಲಿತಿದ್ದೇನೆ. ಕಾರ್ಟ್​ವ್ಹೀಲ್ ಕಲಿತ್ತಿದ್ದೇನೆ, ಇದರೊಂದಿಗೆ ಸ್ಕ್ರಿಪ್ಟ್​​​​​ಗಳನ್ನು ಓದಿದ್ದೇನೆ. ಅಷ್ಟು ಮಾತ್ರವಲ್ಲ ಪಕ್ಷಿಗಳಂತೆ ಕೂಗುವುದನ್ನು ಕಲಿತಿದ್ದೇನೆ. ಇದೊಂದು ಒಳ್ಳೆ ಅನುಭವ ಎಂದು ಅದಾ ಬರೆದುಕೊಂಡಿದ್ದಾರೆ.

ಅದಾ ಸಿನಿಮಾ ವಿಚಾರಕ್ಕೆ ಬರುವುದಾದರೆ 'ಮ್ಯಾನ್ ಟು ಮ್ಯಾನ್' ಸಿನಿಮಾ ಬಹುತೇಕ ಮುಗಿದಿದ್ದು ಶೀಘ್ರದಲ್ಲೇ ಅದಾ ಅವರನ್ನು ಅಭಿಮಾನಿಗಳು ತೆರೆ ಮೇಲೆ ತೃತೀಯ ಲಿಂಗಿ ಪಾತ್ರದಲ್ಲಿ ನೋಡಬಹುದು.

ABOUT THE AUTHOR

...view details