ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಈ ಅವತಾರ ಕಂಡ ನೆಟ್ಟಿಗರು ರಾಜ್ ಕುಂದ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪದ ಮೇಲೆ ರಾಜ್ ಕುಂದ್ರಾ ಜೈಲು ಪಾಲಾಗಿದ್ದರು. ಕೆಲ ಸಮಯದ ಹಿಂದೆ ಜಾಮೀನಿನ ಮೇಲೆ ಹೊರಬಂದಿರುವ ಕುಂದ್ರಾ ಸಾಮಾಜಿಕವಾಗಿ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮರಾ ಕಣ್ಣಿಗೆ ಬೀಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ರಾಜ್ ಕುಂದ್ರಾ.
ಇತ್ತೀಚೆಗೆ ಮುಂಬೈನ ಮೂವಿ ಥಿಯೇಟರ್ಗೆ ರಾಜ್ ಕುಂದ್ರಾ ತಮ್ಮ ಕೆಲ ಕುಟುಂಬಸ್ಥರೊಂದಿಗೆ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇವರು ತಮ್ಮ ಮುಖ ಮುಚ್ಚುವಂತಹ ಬ್ಲ್ಯಾಕ್ ಜಾಕೆಟ್ ಧರಿಸಿದ್ದರು, ಮುಖ ಸಂಪೂರ್ಣವಾಗಿ ಮುಚ್ಚಿದ್ದು ಅದಕ್ಕೆ ಬ್ಲ್ಯಾಕ್ ಸನ್ ಗ್ಲಾಸ್ ಹಾಕಿದ್ದಾರೆ. ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕುಂದ್ರಾ ಟ್ರೋಲಿಗರ ಬಾಯಿಗೆ ಸಿಕ್ಕಿಬಿದ್ದಂತಾಗಿದೆ.