ಕರ್ನಾಟಕ

karnataka

ETV Bharat / sitara

ಪತಿ ರಾಜ್​ಕುಂದ್ರಾ ಬಂಧನದ ಬಳಿಕ ನಟಿ ಶಿಲ್ಪಾಶೆಟ್ಟಿ ಮೊದಲ ಪ್ರತಿಕ್ರಿಯೆ! - Surviving Challenges

ಉದ್ಯಮಿ ರಾಜ್​ಕುಂದ್ರಾ ಬಂಧನದ ಬಳಿಕ ನಟಿ ಶಿಲ್ಪಾಶೆಟ್ಟಿ ಇನ್​ಸ್ಟಾ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

ಶಿಲ್ಪಾಶೆಟ್ಟಿ ಮೊದಲ ಪ್ರತಿಕ್ರಿಯೆ
ಶಿಲ್ಪಾಶೆಟ್ಟಿ ಮೊದಲ ಪ್ರತಿಕ್ರಿಯೆ

By

Published : Jul 23, 2021, 10:50 AM IST

ನವದೆಹಲಿ: ಪತಿ, ಉದ್ಯಮಿ ರಾಜ್​ಕುಂದ್ರಾ ಬಂಧನದ ಬಳಿಕ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಲೇಖಕ ಜೇಮ್ಸ್​ ಥರ್ಬರ್​ ಪುಸ್ತಕದ ಒಂದು ಪುಟವನ್ನು ಪೋಸ್ಟ್ ಮಾಡಿರುವ ನಟಿ, ಲೇಖನದ ಒಂದು ಭಾಗವನ್ನು ಹೈಲೈಟ್ ಮಾಡಿದ್ದಾರೆ.

ನಾವಿರಬೇಕಾದ ಸ್ಥಳದಲ್ಲೇ ನಾವಿದ್ದೇವೆ. ಏನಾಗಿದೆ, ಏನಾಗುತ್ತಿದೆ ಅನ್ನೋದರ ಬಗ್ಗೆ ಯಾವುದೇ ಆತಂಕವಿಲ್ಲ. ಆದರೆ, ವಾಸ್ತವ ಏನಿದೆ ಅನ್ನೋದ್ರ ಬಗ್ಗೆ ಸಂಪೂರ್ಣ ತಿಳಿದಿದೆ ಎಂದು ಅದರಲ್ಲಿ ಬರೆಯಲಾಗಿದೆ.

ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ ಎಂದು ತಿಳಿದುಕೊಂಡು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆಯೂ ಅನೇಕ ಸವಾಲುಗಳನ್ನು ಎದುರಿಸಲಿದ್ದೇನೆ ಎಂದು ಶಿಲ್ಪಾ ಶೆಟ್ಟಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದಾರೆ. ಹಿಂದೆ ಏನಾಗಿತ್ತು. ಮುಂದೆ ಏನಾಗಬಹುದು ಅನ್ನೋ ಚಿಂತೆ ಬಿಟ್ಟು, ಈ ಕ್ಷಣಕ್ಕಾಗಿ ನಾವು ಬದುಕಬೇಕೆಂದು ಶಿಲ್ಪಾಶೆಟ್ಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಒಂದೂವರೆ ವರ್ಷದಲ್ಲಿ 100ಕ್ಕೂ ಹೆಚ್ಚು ಅಶ್ಲೀಲ ಚಿತ್ರ ನಿರ್ಮಿಸಿದ್ದರಂತೆ ರಾಜ್​ಕುಂದ್ರಾ!

ಉದ್ಯಮಿ ರಾಜ್​ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಮುಂಬೈ ಪೊಲೀಸರ ವಶದಲ್ಲಿದ್ದು, ಇದೀಗ ನ್ಯಾಯಾಲಯ ಅವರನ್ನು ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಾಡೆಲ್‌ಗಳನ್ನು ಬಳಸಿಕೊಂಡು ನೀಲಿ ಚಿತ್ರ ನಿರ್ಮಿಸಿ ಅವುಗಳನ್ನು ಆ್ಯಪ್​ಗಳಿಗೆ ಮಾರಾಟ ಮಾಡುತ್ತಿದ್ದ ಗಂಭೀರ ಪ್ರಕರಣದಲ್ಲಿ ರಾಜ್‌ ಕುಂದ್ರಾ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು, ಆರೋಪಿಯನ್ನು ಇನ್ನೂ ಹೆಚ್ಚಿನ ತನಿಖೆಗೆ ಒಳಪಡಿಸಲಿದ್ದಾರೆ.

ABOUT THE AUTHOR

...view details