ಮುಂಬೈ: ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ತನ್ನ ಅಭಿಮಾನಿಗಳಿಗೆ ತಾನು ನಟಿಸಿರುವ ಹೊಸ ಸಿನಿಮಾ ವೀಕ್ಷಿಸುವಂತೆ ಕೋರಿದ್ದಾರೆ. ಈ ಚಿತ್ರವು ಅನೇಕ ಜನರ ಕಠಿಣ ಪರಿಶ್ರಮದ ಫಲ. ನನ್ನಿಂದ ಸಿನಿಮಾಕ್ಕೆ ತೊಂದರೆ ಆಗಬಾರದು ಎಂದು ಟ್ವೀಟ್ ಮಾಡಿದ್ದಾರೆ.
ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ, ಸಿನಿಮಾಗೆ ತೊಂದರೆಯಾಗದಿರಲಿ: ಶಿಲ್ಪಾ ಶೆಟ್ಟಿ - ನಟಿ ಶಿಲ್ಪಾ ಶೆಟ್ಟಿ ನಟನೆಯ ಹಂಗಮಾ 2 ಸುದ್ದಿ
ನೀಲಿ ಚಿತ್ರ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇದೀಗ ಶಿಲ್ಪಾ ಶೆಟ್ಟಿಯವರನ್ನೂ ಕೂಡಾ ಪೊಲೀಸರು ವಿಚಾರಣೆಗೆ ಒಳಪಡಿಸಿರುವ ಮಾಹಿತಿ ದೊರೆತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಟ್ವೀಟ್ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.
ಹಂಗಮಾ 2 ಚಿತ್ರ ವೀಕ್ಷಿಸುವಂತೆ ನಟಿ ಶಿಲ್ಪಾ ಶೆಟ್ಟಿ ಮನವಿ
"ಹಂಗಾಮಾ 2 ನಲ್ಲಿ ಇಡೀ ತಂಡದ ಪ್ರಯತ್ನವಿದೆ. ಚಿತ್ರತಂಡ ಉತ್ತಮ ಸಿನಿಮಾ ಮಾಡಲು ಬಹಳಷ್ಟು ಶ್ರಮಿಸಿದೆ. ಚಲನಚಿತ್ರವು ತೊಂದರೆ ಅನುಭವಿಸಬಾರದು. ಆದ್ದರಿಂದ ಇಂದು, ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ವ್ಯಕ್ತಿಯ ಸಲುವಾಗಿ ನಿಮ್ಮ ಕುಟುಂಬಗಳೊಂದಿಗೆ ಚಿತ್ರ ವೀಕ್ಷಿಸಬೇಕೆಂದು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ" ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 121 ವಿಡಿಯೋ.. 1.2 ಮಿಲಿಯನ್ ಡಾಲರ್: ರಾಜ್ ಕುಂದ್ರಾ ಜುಲೈ 27 ರವರೆಗೆ ಪೊಲೀಸ್ ಕಸ್ಟಡಿಗೆ