ಕರ್ನಾಟಕ

karnataka

ETV Bharat / sitara

ಕೆಟ್ಟ ಸಮಯದ ವಿರುದ್ಧ ಹೋರಾಡಿ ಚೇತರಿಸಿಕೊಳ್ಳಲು ಬಲಶಾಲಿಯಾಗಿದ್ದೇನೆ : ನಟಿ ಶಿಲ್ಪಾಶೆಟ್ಟಿ - ರಾಜ್​ಕುಂದ್ರಾ

ಪತಿ ರಾಜ್​ಕುಂದ್ರಾ ಜೈಲಿನಿಂದ ರಿಲೀಸ್ ಆದ ಬಳಿಕ ಇದೇ ಮೊದಲ ಬಾರಿಗೆ ಶಿಲ್ಪಾಶೆಟ್ಟಿ ಮೌನ ಮುರಿದಿದ್ದು, ಜಾಲತಾಣದಲ್ಲಿ ಸ್ಪೂರ್ತಿದಾಯಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

Shilpa Shetty
Shilpa Shetty

By

Published : Sep 25, 2021, 12:05 PM IST

ನವದೆಹಲಿ: ಉದ್ಯಮಿ ರಾಜ್​ಕುಂದ್ರಾ ಜೈಲಿನಿಂದ ರಿಲೀಸ್ ಆದ ಬಳಿಕ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಸಾಮಾನ್ಯವಾಗಿ ಅವರು ಜಾಲತಾಣಗಳಲ್ಲಿ ಪ್ರೇರಣಾತ್ಮಕ ಪೋಸ್ಟ್​ (Motivational posts) ಸಂದೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಶಿಲ್ಪಾಶೆಟ್ಟಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚಿಂತನಶೀಲ (Thoughtful message) ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಶಿಲ್ಪಾಶೆಟ್ಟಿ, ತಮ್ಮ ಇನ್​ಸ್ಟಾಗ್ರಾಂನಲ್ಲಿ ಕ್ರಿಸ್ಟಿಯನ್ ಬರ್ನಾರ್ಡ್ ಅವರ ‘ದುಃಖವು ಕಡಿಮೆಯಾಗಿದೆ, ಚೇತರಿಕೆ ಕಂಡಿದ್ದೇನೆ’ (Suffering isn't ennobling, recovery is) ಎಂಬ ಹೇಳಿಕೆಯನ್ನು ಒಳಗೊಂಡಿರುವ ಪುಸ್ತಕದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ ‘ಕಷ್ಟದ ಸಮಯ ಓರ್ವ ವ್ಯಕ್ತಿಯನ್ನು ಹೇಗೆ ಬಲಪಡಿಸುತ್ತದೆ’ ಎಂಬ ಶೀರ್ಷಿಕೆ ನೀಡಿದ್ದಾರೆ.

ನಾನು ಕೆಟ್ಟ ಸಮಯವನ್ನು ದ್ವೇಷಿಸುತ್ತೇನೆ. ಆದರೆ, ಕೆಟ್ಟ ಸಮಯದ ವಿರುದ್ಧ ಹೋರಾಡಿ ನಾನು ಚೇತರಿಸಿಕೊಳ್ಳಲು ಬಲಶಾಲಿಯಾಗಿದ್ದೇನೆ ಎಂದು ತಿಳಿದಿದೆ ಎಂದೂ ಉಲ್ಲೇಖಿಸಿದ್ದಾರೆ.

ಅಶ್ಲೀಲ ಚಿತ್ರಗಳ ನಿರ್ಮಾಣ ಸಂಬಂಧ ಜುಲೈ 19ರಂದು ಬಂಧಿಯಾಗಿದ್ದ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್‌, 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್​ ಪಡೆದು ಜಾಮೀನು ನೀಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ಇತ್ತೀಚೆಗೆ ಕುಂದ್ರಾ ವಿರುದ್ಧ 1,400 ಪುಟಗಳ ಚಾರ್ಜ್​​ಶೀಟ್ ಅನ್ನು ನ್ಯಾಯಾಲಯಕ್ಕೆ​ ಸಲ್ಲಿಸಿದ್ದರು. ಅಲ್ಲದೇ ಅಧಿಕಾರಿಗಳು, ನಟಿ ಶಿಲ್ಪಾಶೆಟ್ಟಿ ಸೇರಿ 43 ಸಾಕ್ಷಿಗಳ ಹೇಳಿಕೆಗಳನ್ನು ಪಟ್ಟಿ ಮಾಡಿದ್ರು.

ಇದನ್ನೂ ಓದಿ: ದುನಿಯಾ ವಿಜಯ್ ಡೈಲಾಗ್ ಮೇಲೆ ಡೈಲಾಗ್.. ದುಶ್ಚಟಗಳಿಂದ ದೂರ ಇರುವಂತೆ ಅಭಿಮಾನಿಗಳಿಗೆ ಕಿವಿಮಾತು

ಸದ್ಯ ಶಿಲ್ಪಾಶೆಟ್ಟಿ, ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿದ್ದಾರೆ.

ABOUT THE AUTHOR

...view details